ಮದುವೆಯಲ್ಲಿ ರಸಗೊಲ್ಲ ಜಗಳ, ಸಾವಿನಲ್ಲಿ ಅಂತ್ಯವಾಯ್ತು!

ಶುಕ್ರವಾರ, 28 ಅಕ್ಟೋಬರ್ 2022 (07:37 IST)
ಲಕ್ನೋ : ಊಟದಲ್ಲಿ ರಸಗುಲ್ಲ ಖಾಲಿ ಆಯ್ತು ಅಂತ ಮದುವೆ ಸಮಾರಂಭದಲ್ಲಿಯೇ ಗಲಾಟೆ ನಡೆದು, ಯುವಕನೊಬ್ಬನ ಹತ್ಯೆಯಲ್ಲಿ ಹೊಡೆದಾಟ ಅಂತ್ಯಗೊಂಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
 
ವರದಿಗಳ ಪ್ರಕಾರ ಮದುವೆ ಸಮಾರಂಭದಲ್ಲಿ ರಸಗುಲ್ಲ ಖಾಲಿ ಆಯ್ತು ಅಂತ ವಧು ಹಾಗೂ ವರನ ಕಡೆಯವರ ನಡುವೆ ವಾಗ್ವಾದ ನಡೆದಿದೆ. ಬಳಿಕ ವಾಗ್ವಾದ ಹೊಡೆದಾಟಕ್ಕೆ ತಿರುಗಿ, ಅಲ್ಲೇ ಇದ್ದ ವ್ಯಕ್ತಿಯೊಬ್ಬ ಚಾಕುವಿನಿಂದ ಯುವಕ ಸನ್ನಿ (22) ಮೇಲೆ ಹಲ್ಲೆ ನಡೆಸಿದ್ದಾನೆ.

ಗಂಭೀರವಾಗಿ ಗಾಯಗೊಂಡಿದ್ದ ಸನ್ನಿಯನ್ನು ಮೊದಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಯಿತು. ಬಳಿಕ ಆಗ್ರಾದ ಸರೋಜಿನಿ ನಾಯ್ಡು ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ