ಒಂದೇ ತಿಂಗಳಲ್ಲಿ ದಾಖಲೆ ಮೀರಿದ ಕಾಣಿಕೆ ಸಂಗ್ರಹ?

ಬುಧವಾರ, 3 ಆಗಸ್ಟ್ 2022 (11:10 IST)
ಅಮರಾವತಿ : ಜುಲೈ ತಿಂಗಳಲ್ಲಿ ತಿರುಪತಿ ದೇವಸ್ಥಾನ ದಾಖಲೆ ಮೊತ್ತದ ಕಾಣಿಕೆ ಸಂಗ್ರಹವಾಗಿದೆ.
 
ದೇಗುಲದ ಇತಿಹಾಸದಲ್ಲೇ ಮೊದಲ ಬಾರಿಗೆ ಮಾಸಿಕ ಆದಾಯ 140 ಕೋಟಿ ಕಾಣಿಕೆ ಸಂಗ್ರಹವಾಗಿದೆ.

ದೇಶದ ಶ್ರೀಮಂತ ದೇಗುಲಗಳಲ್ಲಿ ತಿರುಪತಿ ತಿಮ್ಮಪ್ಪನ ದೇಗುಲವೂ ಒಂದು. ಫೆಬ್ರವರಿಯಲ್ಲಿ 79 ಕೋಟಿ, ಮಾರ್ಚ್ನಲ್ಲಿ 128 ಕೋಟಿ, ಏಪ್ರಿಲ್ನಲ್ಲಿ 127 ಕೋಟಿ ಹಾಗೂ ಮೇ ತಿಂಗಳಲ್ಲಿ 130.29 ಕೋಟಿ ರೂ. ಹಣ ಸಂಗ್ರಹವಾಗಿತ್ತು.
ಕೊರೊನಾ ನಂತರ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಇದೀಗ ಜುಲೈ ತಿಂಗಳಲ್ಲಿ ಬರೋಬ್ಬರಿ 139.46 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ