ನೀರವ್ ಮೋದಿ ಬಂಧನಕ್ಕೆ ಇಂಟರ್ ಪೋಲ್ ನೋಟಿಸ್

ಸೋಮವಾರ, 2 ಜುಲೈ 2018 (11:36 IST)
ನವದೆಹಲಿ: ಗುಜರಾತ್ ಮೂಲದ ವಜ್ರ ವ್ಯಾಪಾರಿ ಸಾವಿರಾರು ಕೋಟಿ ರೂ. ವಂಚನೆ ಪ್ರಕರಣದಲ್ಲಿ ಮೋಸ್ಟ್ ವಾಂಟೆಡ್ ಆಗಿರುವ ನೀರವ್ ಮೋದಿ ಬಂಧನಕ್ಕೆ ಇಂಟರ್ ಪೋಲ್ ರೆಡ್ ಕಾರ್ನರ್‍ ನೋಟಿಸ್ ಜಾರಿ ಮಾಡಿದೆ.
 

ಭಾರತದ ತನಿಖಾ ಸಂಸ್ಥೆ ಸಿಬಿಐ ಮನವಿ ಮೇರೆಗೆ ಇಂಟರ್ ಪೋಲ್ ನೀರವ್ ಬಂಧನಕ್ಕಾಗಿ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಇಂಟರ್ ಪೋಲ್ ಅಂಗ ಸಂಸ್ಥೆಯ ಯಾವುದೇ ರಾಷ್ಟ್ರಗಳಲ್ಲಿ ನೀರವ್ ಮೋದಿ ಇದ್ದರೂ ಇದರಿಂದಾಗಿ ಬಂಧನ ಮಾಡಲು ಸಾಧ್ಯವಾಗುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂ. ವಂಚಿಸಿದ ನೀರವ್ ಮೋದಿ ಇತ್ತೀಚೆಗೆ ಲಂಡನ್ ನಲ್ಲಿ ನೆಲೆಸಿದ್ದಾರೆಂಬ ಮಾಹಿತಿಯಿತ್ತು. ಸದ್ಯಕ್ಕೆ ನೀರವ್ ಮೋದಿಯ ಭಾರತೀಯ ಪಾಸ್ ಪೋರ್ಟ್ ರದ್ದಾಗಿದೆ. ಹಾಗಿದ್ದರೂ ಬ್ರಿಟನ್ ನಲ್ಲಿ ಆತ ಕೆಲವು ಬಾರಿ ಪ್ರಯಾಣ ಬೆಳೆಸಿದ್ದ ಎಂದು ಅಲ್ಲಿನ ಪತ್ರಿಕೆಯೊಂದು ವರದಿ ಮಾಡಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ