ನೀರವ್ ಮೋದಿ ಬಗ್ಗೆ ಬ್ರಿಟನ್ ವಿದೇಶಾಂಗ ರಾಜ್ಯ ಸಚಿವ ಬ್ಯಾರನೆಸ್ ವಿಲಿಯಮ್ಸ್ ಹೇಳಿದ ಸ್ಫೋಟಕ ಮಾಹಿತಿ ಏನು ಗೊತ್ತಾ…?
ಮಂಗಳವಾರ, 12 ಜೂನ್ 2018 (15:28 IST)
ನವದೆಹಲಿ : ನವದೆಹಲಿಯಲ್ಲಿ ಬ್ರಿಟನ್ ನಿಯೋಗದೊಂದಿಗೆ ಗೃಹಖಾತೆ ಸಚಿವ ಕಿರೆನ್ ರಿಜಿಜು ಜೊತೆ ಸೋಮವಾರ ನಡೆದ ಮಾತುಕತೆಯಲ್ಲಿಬ್ರಿಟನ್ ವಿದೇಶಾಂಗ ರಾಜ್ಯ ಸಚಿವರಾಗಿರುವ ಬ್ಯಾರನೆಸ್ ವಿಲಿಯಮ್ಸ್ ಅವರು ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ.
ಅದೇನೆಂದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂ. ವಂಚಿಸಿ ದೇಶ ಬಿಟ್ಟಿರುವ ನೀರವ್ ಮೋದಿ ಇಂಗ್ಲೆಂಡ್ ನಲ್ಲೇ ಇದ್ದಾನೆ ಎಂಬ ಮಾಹಿತಿಯನ್ನು ಬ್ರಿಟನ್ ವಿದೇಶಾಂಗ ರಾಜ್ಯ ಸಚಿವರಾಗಿರುವ ಬ್ಯಾರನೆಸ್ ವಿಲಿಯಮ್ಸ್ ಅವರು ತಿಳಿಸಿದ್ದಾರೆ. ಹಾಗೇ ಭಾರತೀಯ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಅಪರಾಧ, ಈ ಕೃತ್ಯ ನಡೆಸಲು ನಾವು ಬಿಡುವುದಿಲ್ಲ. ಇದು ಎರಡೂ ದೇಶಗಳ ಮೇಲೆ ಕೆಟ್ಟ ಪರಿಣಾಮ ಬೀರುವುದರಿಂದ ಭಾರತ ವಿರೋಧಿ ಕೃತ್ಯಗಳನ್ನು ತಡೆಯಲು ಕ್ರಮ ಕೈಗೊಳ್ಳುತ್ತೇವೆಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ