ಫ್ಯಾಕ್ಟ್‌ ಚೆಕ್ಕರ್‌ ಜುಬೇರ್‌ ಕೂಡಲೇ ಬಿಡುಗಡೆ ಮಾಡಿ: ಸಂಪಾದಕರ ಮಂಡಳಿ ಆಗ್ರಹ

ಮಂಗಳವಾರ, 28 ಜೂನ್ 2022 (16:08 IST)

2108ರ ವರದಿಗೆ ಈಗ ಫ್ಯಾಕ್ಟ್‌ ಚೆಕ್ಕರ್‌ ಪತ್ರಕರ್ತ ಮೊಹಮದ್‌ ಜುಬೇರ್‌ ಅವರನ್ನು ಬಂಧಿಸಿರುವುದನ್ನು ಉಗ್ರವಾಗಿ ಖಂಡಿಸಿರುವ ಸಂಪಾದಕರ ಮಂಡಳಿ, ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದೆ.

೨೦೧೮ರಲ್ಲಿ ಪ್ರಕಟವಾದ ವರದಿಗೆ ಈಗ ಬಂಧನ ಮಾಡಿರುವುದು ಸರಿಯಾದ ಕ್ರಮವಲ್ಲ, ಅಲ್ಲದೇ ಈ ರೀತಿಯ ಕ್ರಮಗಳು ಪತ್ರಿಕಾ ಸ್ವಾತಂತ್ರ್ಯದ ಹರಣ ಎಂದು ಸಂಪಾದಕರ ಮಂಡಳಿ ಆರೋಪಿಸಿದೆ.

ಜರ್ಮನಿಯಲ್ಲಿ ನಡೆದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವ ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕಾಗಿದೆ ಎಂದು ಸಂಪಾದಕರ ಮಂಡಳಿ ಹೇಳಿದೆ.

2018ರಲ್ಲಿ ಪ್ರಕಟಿಸಿದ್ದ ಫ್ಯಾಕ್ಟ್‌ ಚೆಕ್‌ ಧಾರ್ಮಿಕ ಭಾವನೆಯನ್ನು ಕೆರಳಿಸುವಂತದ್ದು ಎಂದು ಆರೋಪಿಸಲಾಗಿದೆ. ಅಲ್ಲದೇ ಕಳೆದ ೩ ತಿಂಗಳಲ್ಲಿ 50 ಲಕ್ಷ ರೂ. ಕಂಪನಿ ವಹಿವಾಟು ನಡೆಸಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಇದೇ ವೇಳೆ ಬಂಧನಕ್ಕೊಳಗಾಗಿರುವ ಜುಬೇರ್‌ ತಮ್ಮ ಸಂಸ್ಥೆಯ ಕಂಪ್ಯೂಟರ್‌ ಡಿಸ್ಕ್‌ ಹಂತರಿಸಲು ವಿರೋಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ