ಕರ್ಫ್ಯೂ ವೇಳೆ ಆಹಾರ ಕೊಡದಿದ್ದಕ್ಕೆ ರೆಸ್ಟೋರೆಂಟ್ ಮಾಲಿಕನ ಹತ್ಯೆ

ಭಾನುವಾರ, 2 ಜನವರಿ 2022 (10:13 IST)
ನೋಯ್ಡಾ: ಕೊರೋನಾ ನಿಯಂತ್ರಿಸಲು ನೈಟ್ ಕರ್ಫ್ಯೂ ವಿಧಿಸಿದ ಸಮಯದಲ್ಲಿ ರೆಸ್ಟೋರೆಂಟ್ ನಲ್ಲಿ ಊಟ ಸಿಗದ ಹತಾಶೆಯಲ್ಲಿ ಗ್ರಾಹಕರಿಬ್ಬರು ಮಾಲಿಕನನ್ನೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.

ಇಬ್ಬರು ಗ್ರಾಹಕರು ಈ ರೆಸ್ಟೋರೆಂಟ್ ಗೆ ಹೆಚ್ಚಾಗಿ ಬರುತ್ತಿದ್ದರು ಎನ್ನಲಾಗಿದೆ. ಅದೇ ರೀತಿ ಶುಕ್ರವಾರ ರಾತ್ರಿ 1.30 ರ ವೇಳೆಗೆ ರೆಸ್ಟೋರೆಂಟ್ ಗೆ ಬಂದಿದ್ದು ಊಟ ಕೇಳಿದ್ದಾರೆ.

ಆದರೆ ನೈಟ್ ಕರ್ಫ್ಯೂ ಕಾರಣ ನೀಡಿ ಮಾಲಿಕ ಅವರನ್ನು ಕಳುಹಿಸಲು ನೋಡಿದ್ದಾನೆ. ಇದರಿಂದ ಆಕ್ರೋಶಗೊಂಡ ಇಬ್ಬರು ಆತನ ಮೇಲೆ ಗುಂಡು ಹಾಕಿದ್ದಾರೆ. ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ತನಿಖೆ ನಡೆಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ