ಕುರಿ ಕದ್ದು ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ

ಭಾನುವಾರ, 2 ಜನವರಿ 2022 (09:25 IST)
ಒಡಿಶಾ: ರಕ್ಷಕರೇ ಭಕ್ಷರಾದ ಕತೆಯಿದು. ಜನ ಸಾಮಾನ್ಯರಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಅಧಿಕಾರಿಯೊಬ್ಬರು ಕುರಿ ಕದ್ದು ಸಿಕ್ಕಿಬಿದ್ದ ಘಟನೆ ಒಡಿಶಾದಲ್ಲಿ ನಡೆದಿದೆ.

ಹೊಸ ವರ್ಷಕ್ಕೆ ಬಾಡೂಟ ತಯಾರಿಸುವ ಆಸೆಯಿಂದ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸುಮನ್ ಮಲ್ಲಿಕ್ ಎನ್ನುವವರು ಕುರಿ ಕದ್ದಿದ್ದಾರೆ. ಆದರೆ ಈ ವಿಚಾರ ಕುರಿಗಳ ಮಾಲಿಕನಿಗೆ ಗೊತ್ತಾಗಿದೆ.

ಆದರೆ ಕುರಿ ಬಿಡಲು ಒಪ್ಪದ ಅಧಿಕಾರಿ ಬಾಡೂಟ ಮಾಡಿ ಸವಿದಿದ್ದಾರೆ. ಅಸಮಾಧಾನಗೊಂಡ ಗ್ರಾಮಸ್ಥರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಇದೀಗ ಕುರಿ ಕದ್ದ ಅಧಿಕಾರಿಯನ್ನು ಅಮಾನತುಗೊಳಿಸಿರುವ ಮೇಲಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ