ಪಾಟ್ನಾ : ಹಿಜಬ್ ವಿವಾದ ದಿನೇ ದಿನೇ ತಾರಕಕ್ಕೆ ಏರುತ್ತಿದ್ದು, ಕೇವಲ ರಾಜ್ಯವೊಂದೇ ಅಲ್ಲ ದೇಶವ್ಯಾಪಿ ಹರಡಿದೆ.
ಈಗ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಹಿಜಬ್ ಧರಿಸಿದ ಯುವತಿಗೆ ಯುಕೋ ಬ್ಯಾಂಕ್ನಲ್ಲಿ ವಹಿವಾಟು ನಡೆಸದಂತೆ ನಿರ್ಬಂಧ ಹೇರಿದ ಘಟನೆ ನಡೆದಿದೆ.
ಯುವತಿ ರಾಷ್ಟ್ರೀಕೃತ ಬ್ಯಾಂಕ್ನಿಂದ ಹಣ ಡ್ರಾ ಮಾಡಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆಯ ವೀಡಿಯೋವನ್ನು ಯುವತಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವೀಡಿಯೋವು 2 ನಿಮಿಷ 20 ಸೆಕೆಂಡ್ ಇದೆ. ಯುವತಿಯು ಹಿಜಬ್ ಧರಿಸಿಕೊಂಡು ಬ್ಯಾಂಕ್ಗೆ ಬಂದಿದ್ದಾರೆ. ಇದಕ್ಕೆ ಬ್ಯಾಂಕ್ನ ಉದ್ಯೋಗಿಯು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಹಣವನ್ನು ಡ್ರಾ ಮಾಡಲು ಹಿಜಬ್ ತೆಗೆಯುವಂತೆ ಒತ್ತಾಯಿಸಿದ್ದಾರೆ.
ಯಾರು ಹಿಜಬ್ನ್ನು ತೆಗೆಯುವಂತೆ ಹೇಳುತ್ತಾರೋ ಅವರು ದಾಖಲೆ ಸಮೇತ ಹೇಳಿ ಎಂದು ಯುವತಿಯ ಪೋಷಕರು ಒತ್ತಾಯಿಸಿದ್ದಾರೆ. ಅದಕ್ಕೆ ಬ್ಯಾಂಕ್ ಉದ್ಯೋಗಿಯು ಯುವತಿ ಮಾಡುತ್ತಿರುವ ವೀಡಿಯೋವನ್ನು ನಿಲ್ಲಿಸಲು ಒತ್ತಾಯಿಸಿದ್ದಾರೆ.