ಗರ್ಭಿಣಿಯರು ಕರ್ತವ್ಯಕ್ಕೆ ಅನ್‌ಫಿಟ್‌!

ಭಾನುವಾರ, 30 ಜನವರಿ 2022 (08:38 IST)
ನವದೆಹಲಿ : ಕರ್ತವ್ಯಕ್ಕೆ ಸಂಬಂಧಿಸಿದಂತೆ ಗರ್ಭಿಣಿಯರಿಗೆ ಹೊರಡಿಸಿದ್ದ ಮಾರ್ಗಸೂಚಿಯು ವಿವಾದಕ್ಕೆ ಸಿಲುಕುತ್ತಿದ್ದಂತೆ ಅದನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹಿಂತೆಗೆದುಕೊಂಡಿದೆ.

ಮೂರು ತಿಂಗಳು ಮೇಲ್ಪಟ್ಟ ಗರ್ಭಿಣಿಯರು ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸಲು ʼತಾತ್ಕಾಲಿಕವಾಗಿ ಅನರ್ಹರುʼ ಎಂದು ಎಸ್ಬಿಐ ತನ್ನ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿತ್ತು. 

ಮಾರ್ಗಸೂಚಿಯನ್ನು ವಿರೋಧಿಸಿ ದೆಹಲಿ ಮಹಿಳಾ ಆಯೋಗವು (ಡಬ್ಲ್ಯೂಡಿಸಿ), ಎಸ್ಬಿಐಗೆ ನೋಟಿಸ್ ಜಾರಿ ಮಾಡಿತ್ತು. ದೆಹಲಿ ಮಾರ್ಗಸೂಚಿಯನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ, ಬ್ಯಾಂಕ್ನ ಕ್ರಮವು ತಾರತಮ್ಯ ಹಾಗೂ ಕಾನೂನುಬಾಹಿರವಾಗಿದೆ ಎಂದು ವಿರೋಧ ವ್ಯಕ್ತಪಡಿಸಿದ್ದರು.

ಮೂರು ತಿಂಗಳು ಮೇಲ್ಪಟ್ಟ ಗರ್ಭಿಣಿಯರನ್ನು ಕರ್ತವ್ಯಕ್ಕೆ ಹಾಜರಾಗದಂತೆ ತಡೆಯಲು ಎಸ್ಬಿಐ ಮಾರ್ಗಸೂಚಿ ಹೊರಡಿಸಿದೆ. ಅಲ್ಲದೇ ಅವರು ತಾತ್ಕಾಲಿಕವಾಗಿ ಅನರ್ಹರು ಎಂದು ಸಹ ಹೇಳಿದೆ. ಇದು ತಾರತಮ್ಯದಿಂದ ಕೂಡಿದ್ದು, ಕಾನೂನುಬಾಹಿರವಾಗಿದೆ. ಈ ಮಹಿಳಾ ವಿರೋಧಿ ನಿಯಮವನ್ನು ಹಿಂಪಡೆಯುವಂತೆ ಕೋರಿ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಟ್ವೀಟ್ನಲ್ಲಿ ಸ್ವಾತಿ ತಿಳಿಸಿದ್ದರು.

ಗರ್ಭಿಣಿಯರನ್ನು ತಾತ್ಕಾಲಿಕವಾಗಿ ಅನರ್ಹ ಎಂದು ಪರಿಗಣಿಸಲಾಗುವುದು. ಹೆರಿಗೆ ನಂತರ ನಾಲ್ಕು ತಿಂಗಳೊಳಗೆ ಅವರು ಕರ್ತವ್ಯಕ್ಕೆ ಮರಳಲು ಅನುಮತಿಸಬಹುದು ಎಂದು ಸುತ್ತೋಲೆಯಲ್ಲಿದೆ. ಈ ನಿಯಮಗಳನ್ನು ಬ್ಯಾಂಕ್ ರೂಪಿಸಿದೆ ಎಂದು ತೋರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ