ಮನೆ ಲೂಟಿ ಮಾಡಿ ಮೂವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ

ಗುರುವಾರ, 3 ನವೆಂಬರ್ 2016 (13:20 IST)
ಅಪರಾಧಗಳ ರಾಜಧಾನಿಯಾಗಿ ಬದಲಾಗುತ್ತಿರುವ ಉತ್ತರ ಪ್ರದೇಶದಲ್ಲಿ ದಿನೇ ದಿನೇ ಘೋರಾತೀಘೋರ ದುಷ್ಕೃತ್ಯಗಳು ವರದಿಯಾಗುತ್ತಲೇ ಇರುತ್ತವೆ. ಮಂಗಳವಾರ ಮತ್ತು ಗುರುವಾರ ರಾತ್ರಿ ಕೂಡ ಗ್ರೇಟರ್ ನೊಯ್ಡಾದಲ್ಲಿ ಹೇಯ ಕೃತ್ಯವೊಂದು ನಡೆದಿದ್ದು ಮೂರು ಮನೆಗಳನ್ನು ಲೂಟಿ ಮಾಡಿದ ದರೋಡೆಕೋರರು ಬಳಿಕ ಮೂವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ. 
ಪೀಡಿತ ಮಹಿಳೆಯರು ಇಟ್ಟಿಗೆ ಕಾರ್ಮಿಕರಾಗಿದ್ದು, ಮಧ್ಯರಾತ್ರಿ 12,30 ರ ಸುಮಾರಿಗೆ ಮಹಿಳೆಯರ ಮನೆಗಳಿಗೆ ನುಗ್ಗಿದ ದರೋಡೆಕೋರರು ಈ ಘೋರ ಕೃತ್ಯವನ್ನು ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಗ್ರೇಟರ್ ನೊಯ್ಡಾದ ಪೊಲೀಸ್ ಅಧೀಕ್ಷಕರಾದ ಸುಜಾತಾ ಸಿಂಗ್ ಹೇಳಿದ್ದಾರೆ.
 
ಪೀಡಿತರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ