ಮಹಿಳೆಯಂತೆ ವೇಷ ಹಾಕಿ ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದರು!

ಗುರುವಾರ, 11 ಫೆಬ್ರವರಿ 2021 (09:22 IST)
ಕೋಲ್ಕೊತ್ತಾ: ಮಹಿಳೆಯರಂತೆ ವೇಷ ಹಾಕಿಕೊಂಡ ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರುಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಇಬ್ಬರು ಖದೀಮರನ್ನು ಪಶ್ಚಿಮ ಬಂಗಾಲದ ನಾಡಿಯಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ.


ಮಹಿಳೆಯರಂತೆ ವೇಷ ಹಾಕುತ್ತಿದ್ದ ಇಬ್ಬರು ಖದೀಮರು ರಾತ್ರಿ ಹೊತ್ತು ಕಾರುಗಳನ್ನು ಅಡ್ಡಗಟ್ಟುತ್ತಿದ್ದರು. ಬಳಿಕ ಅವರಿಂದ ಸಿಕ್ಕಿದ್ದನ್ನು ದೋಚುವುದನ್ನೇ ಕಾಯಕ ಮಾಡಿಕೊ0ಡಿದ್ದರು. ಅವರ ದುರದೃಷ್ಟಕ್ಕೆ ಈ ಬಾರಿ ಅವರು ಹೈವೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ