ಉತ್ತರ ಪ್ರದೇಶದಲ್ಲಿ ಭಾರೀ ದರೋಡೆ: ಸಿಎಂ ಯೋಗಿ ಕೆಂಡಾಮಂಡಲ

ಬುಧವಾರ, 17 ಮೇ 2017 (07:12 IST)
ಲಕ್ನೋ: ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹಿಂದೆಂದಿಗಿಂತಲೂ ಬಿಗಿಗೊಳಿಸಿದ್ದೇನೆಂಬ ಭಾವನೆಯಲ್ಲಿದ್ದ ಸಿಎಂ ಯೋಗಿಗೆ ಆಭರಣದ ಅಂಗಡಿಯಲ್ಲಿ ನಡೆದ ಭಾರೀ ದರೋಡೆ ಪ್ರಕರಣ ಆಕ್ರೋಶ ಮೂಡಿಸಿದೆ.

 
ಮಥುರಾದಲ್ಲಿ ಸೋಮವಾರ ಜ್ಯುವೆಲ್ಲರಿಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು, ಇಬ್ಬರು ಜ್ಯುವೆಲ್ಲರ್ ಗಳನ್ನು ಕೊಲೆ ಮಾಡಿ ಸುಮಾರು 4 ಕೋಟಿ ರೂ. ದೋಚಿ ಪರಾರಿಯಾಗಿದ್ದರು. ಘಟನೆಯ  ಬಗ್ಗೆ ತನಿಖೆ ನಡೆಸಲು ಉನ್ನತ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಯಾವುದೇ ಪ್ರಭಾವಶಾಲಿಗಳ ಕೈವಾಡವಿದ್ದವೂ, ಆರೋಪಿಗಳನ್ನು ಸುಮ್ಮನೇ ಬಿಡೋದಿಲ್ಲ ಎಂದು ಸಿಎಂ ಯೋಗಿ ಸದನದಲ್ಲಿ ಗುಡುಗಿದ್ದಾರೆ. ತನಿಖೆ ನಡೆಸಲು ಕಾಲಮಿತಿ ನೀಡಲಾಗಿದ್ದು, ಅಷ್ಟರೊಳಗೆ ಪೊಲೀಸರು ತನಿಖೆ ಪೂರ್ಣಗೊಳಿಸಲಿದ್ದಾರೆ ಎಂದು ಸಿಎಂ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ