ರೋಹ್ಟಕ್‌ನಲ್ಲಿ ನಿರ್ಭಯಾ ಪ್ರಕರಣಕ್ಕಿಂತ ಹೀನ ಕೃತ್ಯ ಬಹಿರಂಗ

ಶನಿವಾರ, 13 ಮೇ 2017 (16:14 IST)
ಹರಿಯಾಣಾದ ಸೋನೆಪತ್ ಜಿಲ್ಲೆಯಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದ ಬಾಲಕಿ ಮೇ 9 ರಂದು ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾಮುಕರು ಆಕೆಯನ್ನು ಅಪಹರಿಸಿ ನಿರ್ಭಯಾಗಿಂತ ಹೀನವಾಗಿ ಅತ್ಯಾಚಾರವೆಸಗಿರುವುದು ಬೆಳಕಿಗೆ ಬಂದಿದೆ. 
 
ಡಿಸೆಂಬರ್ 16, 2012 ರಂದು ನಡೆದ ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಿದ ಕೇವಲ ಒಂದು ವಾರದ ಹಿಂದೆ ನಂತರ ನಿರ್ಭಯಾ ಘಟನೆಯನ್ನು ಮೀರಿಸುವಂತಹ ಪ್ರಕರಣ ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ವರದಿಯಾಗಿದೆ. 
 
ಹರಿಯಾಣದ ರೋಹ್ಟಕ್‌ನಲ್ಲಿ ಹದಿಹರೆಯದ ಬಾಲಕಿಯನ್ನು ಅಪಹರಿಸಿದ ಏಳು ಮಂದಿ ಕಾಮುಕರು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಗ್ಯಾಂಗ್‌ರೇಪ್ ಎಸಗಲಾಗಿತ್ತು. ಆಕೆಯ ಮೃತದೇಹ ಮೇ 11 ರಂದು ಪತ್ತೆಯಾಗಿತ್ತು. ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. 
 
ಪೊಲೀಸ್ ತನಿಖೆಯ ಪ್ರಕಾರ, ಹರಿಯಾಣಾದ ಸೋನೆಪತ್ ಜಿಲ್ಲೆಯಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದ ಬಾಲಕಿ ಮೇ 9 ರಂದು ಕೆಲಸಕ್ಕೆ ತೆರಳಿ ನಂತರ ಮನೆಗೆ ವಾಪಸ್ ಬರದಿದ್ದರಿಂದ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.  
 
ಬಾಲಕಿಯ ಮೃತದೇಹದ ಸ್ಥಿತಿ ನೋಡಿದ ಪೊಲೀಸರಿಗೆ ಆಘಾತವಾಗಿತ್ತು. ಬಾಲಕಿಯ ದೇಹದ ಮೇಲೆಲ್ಲಾ ಗಾಯದ ಗುರುತುಗಳಿದ್ದವು. ಹರಿತವಾದ ವಸ್ತುಗಳನ್ನು ಆಕೆಯ ಗುಪ್ತಾಂಗದಲ್ಲಿ ತೂರಲಾಗಿತ್ತು. ತಲೆಯನ್ನು ಜಜ್ಜಿಹಾಕಲಾಗಿತ್ತು. ನಂತರ ಆಕೆಯ ಮೇಲೆ ವಾಹನ ಕೂಡಾ ಹರಿಸಲಾಗಿತ್ತು. 
 
ಬಾಲಕಿಯ ಮೃತ ದೇಹ ಗುರುತು ಹತ್ತಬಾರದು ಎನ್ನುವ ಉದ್ದೇಶದಿಂದ ಇಂತಹ ಅಪರಾಧ ಎಸಗಲಾಗಿದೆ. ಫೋರೆನ್ಸಿಕ್ ತಂಡ ಕೂಡಾ ಬಾಲಕಿಯ ಮೇಲೆ ಕ್ರೂರವಾಗಿ ಗ್ಯಾಂಗ್‌ರೇಪ್ ಎಸಗಿ ಆಕೆಯ ಗುಪ್ತಾಂಗದಲ್ಲಿ ಚಾಕುವಿನಂತಹ ವಸ್ತುಗಳನ್ನು ತೂರಲಾಗಿದೆ ಎನ್ನುವುದನ್ನು ಖಚಿತಪಡಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ನೆರೆಮನೆಯ ಸುಮಿತ್ ಎನ್ನುವ ಯುವಕ ಬಾಲಕಿಯೊಂದಿಗೆ ವಿವಾಹದ ಪ್ರಸ್ತಾವನೆ ಇಟ್ಟಿದ್ದ. ಆದರೆ, ಆಕೆ ತಿರಸ್ಕರಿಸಿದ್ದರಿಂದ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾಗಿ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
 
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಏಳು ಮಂದಿ ಆರೋಪಿಗಳ ಬಂಧನಕ್ಕಾಗಿ ಜಾಲ ಬೀಸಿದ್ದಾರೆ. ಶೀಘ್ರಧಲ್ಲಿಯೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ