ಮಹಾತ್ಮಾ ಗಾಂಧಿ ಹತ್ಯೆಯಾದಾಗ ಆರೆಸ್ಸೆಸ್ ಸಿಹಿ ಹಂಚಿ ಸಂಭ್ರಮಿಸಿತ್ತು: ಕಾಂಗ್ರೆಸ್
ಶನಿವಾರ, 27 ಆಗಸ್ಟ್ 2016 (16:33 IST)
ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಶಾಂತಿ ಮತ್ತು ಸಾಮರಸ್ಯತೆಯನ್ನು ವಿರೋಧಿಯಾಗಿದ್ದು ಅವರ ಹತ್ಯೆಯಾದಾಗ ಸಿಹಿ ಹಂಚಿ ಸಂಭ್ರಮಿಸಿತ್ತು ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಮಹಾತ್ಮಾ ಗಾಂಧಿ ಹತ್ಯೆಯಲ್ಲಿ ಆರೆಸ್ಸೆಸ್ ಸಂಸ್ಥೆಯ ಕೈವಾಡವಿದೆ ಎನ್ನುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಆರೆಸ್ಸೆಸ್ ಟೀಕೆಗಳನ್ನು ಮುಂದುವರಿಸಿರುವಂತೆ ಕಾಂಗ್ರೆಸ್ ಹೇಳಿಕೆ ಹೊರಬಿದ್ದಿದೆ.
ಕಾಂಗ್ರೆಸ್ ಮುಖಂಡ ರಿಜ್ವಾನ್ ಅರ್ಶದ್ ಸುದ್ದಿಗಾರರೊಂದಿಗೆ ಮಾತನಾಡಿ, ಆರೆಸ್ಸೆಸ್ ಸಂಸ್ಥೆ ಸ್ವ ಹಿತಾಸಕ್ತಿಗಾಗಿ ಬದ್ಧವಾಗಿದ್ದರಿಂದ ಕಾಂಗ್ರೆಸ್ ಪಕ್ಷ ಆರೆಸ್ಸೆಸ್ ವಿರುದ್ಧದ ಹೋರಾಟ ಮುಂದುವರಿಸಲಿದೆ ಎಂದರು.
ಮಹಾತ್ಮಾ ಗಾಂಧಿ ಹತ್ಯೆಯ ರೂವಾರಿ ನಾಥುರಾಮ್ ಗೋಡ್ಸೆ ಆರೆಸ್ಸೆಸ್ ಸಂಘಟನೆಗೆ ಸೇರಿದವನು ಎನ್ನುವುದು ಜಗಜ್ಜಾಹಿರ ಸಂಗತಿ. ಗಾಂಧಿದೇಶದ ಎಲ್ಲಾ ಸಮುದಾಯದವರು ಒಗ್ಗಟ್ಟಿನಿಂದ ಬಾಳಿ ದೇಶದ ಅಖಂಡತೆಯನ್ನು ಕಾಪಾಡಿಕೊಳ್ಳುವಂತೆ ನೀಡಿದ ಕರೆಯಿಂದ ಆರೆಸ್ಸೆಸ್ ಅಸಮಾಧಾನಗೊಂಡು ಹತ್ಯೆ ಮಾಡಿತ್ತು ಎಂದು ಆರೋಪಿಸಿದ್ದಾರೆ.
ಮಹಾತ್ಮಾ ಗಾಂಧಿ ಹತ್ಯೆಯಾದಾಗ ಆರೆಸ್ಸೆಸ್ ಸಿಹಿ ಹಂಚಿ ಸಂಭ್ರಮಿಸಿತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಗೆ ದೇಶದಲ್ಲಿ ರಕ್ತಪಾತವಾಗುವುದು ಬೇಕಾಗಿತ್ತು. ಮಹಾತ್ಮಾ ಗಾಂಧಿ ಹತ್ಯೆಗೆ ಅದರ ಸಿದ್ಧಾಂತವೇ ಕಾರಣವಾಯಿತು ಎಂದು ಕಾಂಗ್ರೆಸ್ ಮುಖಂಡ ರಿಜ್ವಾನ್ ಅರ್ಶದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ