ಜೂನ್ ವರೆಗೂ ಮುಂದುವರಿಯಲಿದೆ ಲಾಕ್ ಡೌನ್: ನಿಜವೇ? ಸುಳ್ಳೇ?
ದೆಹಲಿಯ ಲೋಕನಾಯಕ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕೊರೋನಾ ರೋಗಿಗಳನ್ನು ನೋಡಿಕೊಳ್ಳಲು ಪಾಸ್ ವಿತರಿಸಲಾಗಿದ್ದು, ಇದರ ವ್ಯಾಲಿಡಿಟಿ ಮಾರ್ಚ್ 25 ರಿಂದ ಜೂನ್ 30ವರೆಗೂ ಇದೆ. ಇದನ್ನು ನೋಡಿ ಇಂತಹದ್ದೊಂದು ಸುದ್ದಿ ಹರಿದಾಡಿತ್ತು.ಆದರೆ ಇದರ ಬೆನ್ನಲ್ಲೇ ಪ್ರೆಸ್ ಇನ್ ಫಾರ್ಮೇಷನ್ ಬ್ಯೂರೋ (ಪಿಐಬಿ) ಸ್ಪಷ್ಟನೆ ನೀಡಿದ್ದು ಇಂತಹ ಸುದ್ದಿಗಳೆಲ್ಲಾ ನಿರಾಧಾರ ಎಂದಿದೆ. ಅಲ್ಲದೆ ಸರ್ಕಾರಕ್ಕೆ ಆ ಬಳಿಕವೂ ಲಾಕ್ ಡೌನ್ ಮುಂದುವರಿಸುವ ಯೋಚನೆಯಿಲ್ಲ ಎಂದು ಸ್ಪಷ್ಟನೆ ನೀಡಿದೆ.