ಡಾಲರ್‌ ಎದುರು ಸಾರ್ವಕಾಲಿಕ ಮಟ್ಟಕ್ಕೆ ಕುಸಿದ ರೂಪಾಯಿ!

ಸೋಮವಾರ, 9 ಮೇ 2022 (15:38 IST)
ಚೀನಾದಲ್ಲಿ ಕೊರೊನಾ ಅಬ್ಬರ ಹಾಗೂ ಉಕ್ರೇನ್‌ ಮೇಲೆ ರಷ್ಯಾ ದಾಳಿ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಆರ್ಥಿಕ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಡಾಲರ್‌ ಎದುರು ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಭಾರತದ ರೂಪಾಯಿ ಮೌಲ್ಯ ಕುಸಿತ ಕಂಡಿದೆ.
ಸೋಮವಾರ ಡಾಲರ್‌ ಎದುರು ರೂಪಾಯಿ ಮೌಲ್ಯ ಎನ್‌ ಎಸ್‌ ಇ ಇಂಡೆಕ್ಸ್‌ ನಲ್ಲಿ 1.06 ರೂ. ಕುಸಿತ ಕಂಡಿದ್ದರೆ, ಬಿಎಸ್‌ ಇ ಇಂಡೆಕ್ಸ್‌ ನಲ್ಲಿ 1.09 ರೂ. ಕುಸಿತ ಕಂಡಿದೆ.
ಮಾರುಕಟ್ಟೆಲ್ಲಿ ಡಾಲರ್‌ ಎದುರು ರೂಪಾಯಿ ರೂಪಾಯಿ ಇದೀಗ 77.46 ರೂ.ಗೆ ಏರಿಕೆಯಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ