ಪತ್ನಿಯ ಲವ್ವರ್ ನಿಂದಲೇ ಹತ್ಯೆಗೀಡಾದ ಸಮಾಜವಾದಿ ಪಕ್ಷದ ನಾಯಕ
ಈ ಸಂದರ್ಭದಲ್ಲಿ ಪತ್ನಿ ಕೂಡಾ ಪ್ರಿಯಕರನ ಜತೆಗೆ ಸೇರಿ ಕೃತ್ಯದಲ್ಲಿ ಪಾಲ್ಗೊಂಡಿದ್ದಾಳೆ ಎನ್ನಲಾಗಿದೆ. ಜಗದೀಶ್ ಮಾಲಿ ಮತ್ತು ಪತ್ನಿಯ ಪ್ರಿಯಕರ ದಿಲೀಪ್ ನಡುವೆ ಮಾರಾಮಾರಿ ನಡೆದಿದ್ದು, ಈ ಸಂದರ್ಭದಲ್ಲಿ ದಿಲೀಪ್, ಜಗದೀಶ್ ಮೇಲೆ ಗುಂಡು ಹಾರಿಸಿದ್ದ. ಈ ಸಂದರ್ಭದಲ್ಲಿ ಜಗದೀಶ್ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗ ಜಗದೀಶ್ ಪತ್ನಿಯನ್ನು ಪೊಲೀಸರು ಬಂಧಿಸಿದ್ದು, ಪ್ರಿಯಕರನಿಗಾಗಿ ಹುಡುಕಾಟ ನಡೆಸಿದ್ದಾರೆ. ಕೃತ್ಯ ನಡೆಸಿದ ಬಳಿಕ ದಿಲೀಪ್ ಸ್ಥಳದಿಂದ ಪರಾರಿಯಾಗಿದ್ದ.