ಸೈಕಲ್ ಚಿಹ್ನೆ: ಆದೇಶ ಕಾಯ್ದಿರಿಸಿದ ಆಯೋಗ

ಶುಕ್ರವಾರ, 13 ಜನವರಿ 2017 (17:47 IST)
ಸಮಾಜವಾದಿ ಪಕ್ಷದ ಚಿಹ್ನೆ ಸೈಕಲ್‌ನ್ನು ಯಾರಿಗೆ ನೀಡಬೇಕೆಂಬುದಕ್ಕೆ ಸಂಬಂಧಿಸಿದ ಆದೇಶವನ್ನು ಚುನಾವಣಾ ಆಯೋಗ ಕಾಯ್ದಿರಿಸಿದೆ.
ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಕೌಟುಂಬಿಕ  ಕಲಹ ಪಕ್ಷವನ್ನೇ ಒಡೆಯಲು ಕಾರಣವಾಗಿದೆ. ಮತ್ತೀಗ ಎರಡು ಬಣದವರು ಪಕ್ಷದ ಚಿಹ್ನೆ 'ಸೈಕಲ್'ನ್ನು ತಮ್ಮದಾಗಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಚುನಾವಣಾ ಆಯೋಗದ ಮೆಟ್ಟಿಲೇರಿದ್ದರು.
 
ಈ ಕುರಿತು ಚುನಾವಣಾ ಆಯೋಗ ಇಂದು ವಿಚಾರಣೆ ನಡೆಸಿತು. ಸುಮಾರು 4ಗಂಟೆಗಿಂತಲೂ ಹೆಚ್ಚು ಕಾಲ ಎರಡು ಕಡೆಯವರ ವಾದ ಪ್ರತಿವಾದ ಆಲಿಸಿ, ದಾಖಲೆಗಳನ್ನು ಪರಿಶೀಲಿಸಿದ್ದು, ಚಿಹ್ನೆಯಾರಿಗೆ ಸೇರಬೇಕು ಎಂಬ ನಿರ್ಧಾರವನ್ನು ಕಾಯ್ದಿರಿಸಿದೆ. 
 
ಇಂದು ಮಧ್ಯಾಹ್ನ 12.30ಕ್ಕೆ ದೆಹಲಿಯಲ್ಲಿನ ಚುನಾವಣಾ ಆಯೋಗದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಲಾಯಂ ಸಿಂಗ್ ಯಾದವ್ ಉಪಸ್ಥಿತರಿದ್ದರು.  ಆದರೆ ಅವರ ಪುತ್ರ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬದಲಾಗಿ ಸಂಬಂಧಿಕ ರಾಮ ಗೋಪಾಲ್ ಯಾದವ್ ಹಾಜರಿದ್ದರು.
 
ಜನವರಿ 17ರಂದು ಆಯೋಗ ಆದೇಶ ನೀಡುವ ಸಾಧ್ಯತೆಗಳಿದೆ.
 
ಉತ್ತರ ಪ್ರದೇಶದಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಫೆಬ್ರವರಿ 11ರಿಂದ ಪ್ರಾರಂಭವಾಗಿ ಮಾರ್ಚ್ 8 ರಂದು ಮುಕ್ತಾಯಗೊಳ್ಳಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ