ಮುಂದಿನ ತಿಂಗಳ ಆರಂಭದಲ್ಲಿ ಕೋಲ್ಕತ್ತಾದಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ನಳಿನಿ ಅವರಿಗೆ ಸೂಚನೆ ನೀಡಲಾಗಿದ್ದು, ಪಿಎಮ್ಎಲ್ಎ (Prevention of Money Laundering Act) ಕಾನೂನಿನಡಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಸಾಧ್ಯತೆಗಳಿವೆ.
ಈ ಹಿಂದೆ ಕೂಡ ಪ್ರಕರಣ ಸಂಬಂಧ ನಳಿನಿ ಚಿದಂಬರಂ ಅವರನ್ನು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ವಿಚಾರಣೆಗೆ ಒಳಪಡಿಸಿತ್ತು. ಕಾಂಗ್ರೆಸ್ ನಾಯಕ ಮಂತಾಂಗ್ ಸಿನ್ಹಾ ಅವರ ಪರಿತ್ಯಕ್ತ ಪತ್ನಿ ಮನೋರಂಜನ್ ಸಿನ್ಹಾ ಅವರ ಕೋರಿಕೆ ಮೇರೆಗೆ ನಲಿನಿ ಅವರನ್ನು ಶಾರದಾ ಸಂಸ್ಥೆಯ ವಕೀಲೆಯನ್ನಾಗಿ ನೇಮಕ ಮಾಡಿಕೊಳ್ಳಲಾಗಿತ್ತು ಎಂದು ಸದ್ಯ ಜೈಲಿನಲ್ಲಿರುವ ಶಾರದಾ ಮುಖ್ಯಸ್ಥ ಸುದಿಪ್ತ್ ಸೇನ್ ಅವರು ಈ ಹಿಂದೆ ತಿಳಿಸಿದ್ದರು.