ಎಐಎಡಿಎಂಕೆ ಬಣಗಳ ವಿಲೀನ ಕುರಿತು ಪನ್ನೀರ್ ಸೆಲ್ವಂ ಜತೆ ಚರ್ಚೆಗೆ ಶಶಿಕಲಾ ಸೂಚನೆ

ಮಂಗಳವಾರ, 6 ಜೂನ್ 2017 (13:25 IST)
ಬೆಂಗಳೂರು: ಎರಡು ಬಣಗಳಾಗಿ ಮಾರ್ಪಟ್ಟಿರುವ ಎಐಎಡಿಎಂಕೆ ಪಕ್ಷದ ಬಣಗಳನ್ನು ವಿಲೀನಗೊಳಿಸುವ ಸಂಬಂಧ ಮಾಜಿ ಸಿಎಂ ಪನ್ನೀರ್ ಸೆಲ್ವಂರೊಂದಿಗೆ ಚರ್ಚೆ ನಡೆಸುವಂತೆ ಪಕ್ಷದ ಉಚ್ಛಾಟಿತ ನಾಯಕಿ ವಿ ಕೆ ಶಶಿಕಲಾ ತಮ್ಮ ಸಂಬಂಧಿ ಟಿಟಿವಿ ದಿನಕರನ್ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
 
ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ವಿಕೆ ಶಶಿಕಲಾ ಅವರನ್ನು ಟಿಟಿವಿ ದಿನಕರನ್ ಅವರು ಭೇಟಿ ಮಾಡಿದ್ದು, ಈ ವೇಳೆ ಶಶಿಕವಾ ದಿನಕರನ್ ಗೆ ಸೂಚನೆ ನೀಡಿದ್ದಾರೆ. . ಅಕ್ರಮ ಆಸ್ತಿ ಗಳಿಕೆ  ಪ್ರಕರಣ ಸಂಬಂಧ ಶಶಿಕಲಾ ಜೈಲು ಪಾಲಾದ ಬಳಿಕ ಎಐಎಡಿಎಂಕೆ ಪಕ್ಷದಲ್ಲಿ ಆಂತರಿಕ ಬೆಳವಣಿಗೆಗಳು ನಡೆದಿದ್ದವು. ಪರಿಣಾಮ ಪನ್ನೀರ್ ಸೆಲ್ವಂ ಮತ್ತು ಸಿಎಂ ಎಡಪ್ಪಾಡಿ ಪಳನಿ ಸ್ವಾಮಿ ಬಣ ವಿಲೀನದ ಕುರಿತು ಮಾತುಕತೆ  ನಡೆಸುತ್ತಿವೆ.
 
ಭೇಟಿ ವೇಳೆ ಶಶಿಕಲಾ ಬಣದ 12 ಶಾಸಕರು ಮತ್ತು ಓರ್ವ ಸಂಸದರು ಜೈಲಿಗೆ ಆಗಮಿಸಿದ್ದರು. ಆದರೆ ಜೈಲು ಸಿಬ್ಬಂದಿ ನಾಲ್ಕು ಮಂದಿಯನ್ನು ಮಾತ್ರ ಶಶಿಕಲಾ ಭೇಟಿಗೆ ಕಳುಹಿಸಿಕೊಟ್ಟಿದ್ದರು. ಭೇಟಿ ವೇಳೆ ದಿನಕರನ್ ಕಳೆದ 45 ದಿನಗಳ ರಾಜಕೀಯ ಬೆಳವಣಿಗೆಗಳನ್ನು ಶಶಿಕಾಲ ಅವರಿಗೆ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
 

ವೆಬ್ದುನಿಯಾವನ್ನು ಓದಿ