ರಾಜಕೀಯಕ್ಕೆ ದಿಡೀರ್ ನಿವೃತ್ತಿ ಘೋಷಿಸಿದ ಚಿನ್ನಮ್ಮ ಶಶಿಕಲಾ
ಆದರೆ ಇದೀಗ ಇದ್ದಕ್ಕಿದ್ದಂತೆ ಸಕ್ರಿಯ ರಾಜಕೀಯದಿಂದ ದೂರವುಳಿಯುವ ನಿರ್ಧಾರ ಪ್ರಕಟಿಸಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಅತ್ತ ಪಕ್ಷದ ವಿರುದ್ಧವೇ ಬಂಡಾಯವೆದ್ದು ಚುನಾವಣೆ ಹೊಸ್ತಲಲ್ಲಿ ತಲೆನೋವಾಗಲಿದ್ದ ಶಶಿಕಲಾ ನಿವೃತ್ತಿ ಘೋಷಿಸಿರುವುದು ಎಐಡಿಎಂಕೆಗೆ ನಿರಾಳ ಉಂಟುಮಾಡಿದೆ.
ಜಯಲಲಿತಾ ಬದುಕಿದ್ದಾಗಲೂ ನಾನು ಅಧಿಕಾರಕ್ಕಾಗಿ ಆಸೆಪಟ್ಟವಳಲ್ಲ. ಎಐಡಿಎಂಕೆ ಈ ಚುನಾವಣೆಯಲ್ಲಿ ಡಿಎಂಕೆಯನ್ನು ಸೋಲಿಸಿ ಮತ್ತೆ ಅಧಿಕಾರಕ್ಕೆ ಬರುವುದಷ್ಟೇ ನನ್ನ ಉದ್ದೇಶ. ಎಲ್ಲರೂ ಡಿಎಂಕೆಯನ್ನು ಸೋಲಿಸಲು ಕೈ ಜೋಡಿಸೋಣ ಎಂದು ಅವರು ಹೇಳಿದ್ದಾರೆ.