ದಂಡ ಪಾವತಿಸದಿದ್ದರೆ ಶಶಿಕಲಾಗೆ 13 ತಿಂಗಳು ಹೆಚ್ಚುವರಿ ಜೈಲು

ಬುಧವಾರ, 22 ಫೆಬ್ರವರಿ 2017 (09:10 IST)
ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜ್, ದಂಡದ ಮೊತ್ತವಾಗಿರುವ 10 ಕೋಟಿ ರೂ.ಗಳನ್ನು ಪಾವತಿಸದೇ ಇದ್ದರೆ, ಹೆಚ್ಚುವರಿಯಾಗಿ 13 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಈ ಕುರಿತು ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಸುಪ್ರೀಂ ಕೋರ್ಟ್ ತೀರ್ಪಿನಂತೆ ಶಶಿಕಲಾ ಅವರು 10 ಕೋಟಿ ರೂ.ಗಳನ್ನು ದಂಡ ಪಾವತಿಸಬೇಕು. ಅದು ಸಾಧ್ಯವಾಗದಿದ್ದರೆ 13 ತಿಂಗಳು ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
 
ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿ ಶಶಿಕಲಾ ಅವರನ್ನು ಫೆಬ್ರುವರಿ 14ರಂದು ಸುಪ್ರೀಂ ಕೋರ್ಟ್ ದೋಷಿ ಎಂದು ತೀರ್ಪು ನೀಡಿ, 10 ಕೋಟಿ ರೂ. ದಂಡ, 4 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ 2014ರ ಸೆಪ್ಟೆಂಬರ್‍‌ನಲ್ಲಿ ಪರಪ್ಪನ ಅಗ್ರಹಾರದಲ್ಲಿ 21 ದಿನಗಳ ಕಾಲ ಕಳೆದ ಹಿನ್ನೆಲೆಯಲ್ಲಿ ಶಶಿಕಲಾ ಒಟ್ಟು 3 ವರ್ಷ, 11 ತಿಂಗಳು ಜೈಲಿನಲ್ಲಿ ಇರಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ