ಚೆನ್ನೈನಲ್ಲಿ ಪೊಲೀಸ್ ಸರ್ಪಗಾವಲು: ರೆಸಾರ್ಟ್`ನಲ್ಲೇ ಉಳಿದ ಚಿನ್ನಮ್ಮ
ಮಂಗಳವಾರ, 14 ಫೆಬ್ರವರಿ 2017 (10:28 IST)
ಸಿಎಂಗಾದಿಗೇರಲು ತುದಿಗಾಲ ಮೇಲೆ ನಿಂತಿರುವ ಶಶಿಕಲಾಗೆ ಇವತ್ತು ನಿರ್ಣಾಯಕ ದಿನ. ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪನ್ನ ಸುಪ್ರೀಂಕೋರ್ಟ್ ಇವತ್ತು ಪ್ರಕಟಿಸಲಿದೆ. ಶಶಿಕಲಾ ಸಹ ಪ್ರಕರಣದಲ್ಲಿ ಆರೋಪಿಯಾಗಿದ್ದು, ಸುಪ್ರೀಂಕೋರ್ಟ್ ಕೊಡುವ ತೀರ್ಪು ಭವಿಷ್ಯ ನಿರ್ಧರಿಸಲಿದೆ.
ಈ ಮಧ್ಯೆ, ಸುಪ್ರೀಂ ತೀರ್ಪಿನ ಹಿನ್ನೆಲೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಜಯಲಲಿತಾ ನಿವಾಸವಿರುವ ಫೋಯಸ್ ಗಾರ್ಡನ್, ಕರುಣಾನಿಧಿ ನಿವಾಸ, ಪಕ್ಷದ ಕಚೇರಿಗಳು, ರಾಜಭವನ ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರನ್ನ ನಿಯೋಜಿಸಲಾಗಿದೆ. ಒಟ್ಟು 25 ಸಾವಿರ ಪೊಲೀಸರನ್ನ ನಿಯೋಜಿಸಲಾಗಿದೆ.
ಇತ್ತ, ಸುಪ್ರೀಂ ತೀರ್ಪಿನತ್ತ ಚಿತ್ತ ನೆಟ್ಟಿರುವ ಶಶಿಕಲಾ ಶಾಸಕರ ಜೊತೆ ರೆಸಾರ್ಟ್`ನ್ಲೇ ವಾಸ್ತವ್ಯ ಹೂಡಿದ್ದಾರೆ. ತೀರ್ಪಿನ ಬಳಿಕವಷ್ಠೆ ಶಾಸಕರ ಜೊತೆ ಚೆನ್ನೈಗೆ ಬರಲು ನಿರ್ಧರಿಸಿದ್ದಾರೆ.