15 ವರ್ಷಗಳ ಬಳಿಕ ರೈಲು ಹತ್ತಿದ ಗಂಗೂಲಿಗೆ ಶಾಕ್..!

ಬುಧವಾರ, 19 ಜುಲೈ 2017 (09:36 IST)
ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ 15 ವರ್ಷಗಳ ಬಳಿಕ ಟ್ರೇನ್ ಹತ್ತಿದ್ದರು. ಆದರೆ, ಅವರ ಪ್ರಯಾಣಕ್ಕೆ ಆರಂಭದಲ್ಲೇ ವಿಘ್ನ ಬಂದಿತ್ತು. ಮುಂಗಡ ಕಾಯ್ದಿರಿಸಿದ್ದರೂ ಸೀಟಿಗಾಗಿ ಸೌರವ್ ಗಂಗೂಲಿ ಜಗಳ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.

ಪಶ್ಚಿಮ ಬಂಗಾಳದ ಸಿಎಬಿ ಕಾರ್ಯದರ್ಶಿ ಅಭಿಷೇಕ್ ದಾಲ್ಮಿಯಾ ಜೊತೆ ಗಂಗೂಲಿ ಪದಟಿಕ್ ಎಕ್ಸ್`ಪ್ರೆಸ್ ರೈಲಿನಲ್ಲಿ ಬಲೂರ್ ಘಾಟ್`ಗೆ ಪ್ರಯಾಣ ಬೆಳೆಸಿದ್ದರು. ತಾವು ಬುಕ್ ಮಾಡಿದ್ದ ಎಸಿ ಫಸ್ಟ್ ಕ್ಲಾಸ್ ಸೀಟನ್ನ ಬೇರೊಬ್ಬ ಪ್ರಯಾಣಿಕ ಆಕ್ರಮಿಸಿಕೊಂಡಿದ್ದ. ಗಂಗೂಲಿ ಮನವಿ ಮಾಡಿದರೂ ಸೀಟ್ ಬಿಟ್ಟುಕೊಡದೇ ಜಗಳಕ್ಕೆ ನಿಂತುಬಿಟ್ಟ. ಕೊನೆಗೂ ಸೀಟ್ ಬಿಟ್ಟುಕೊಡಲಿಲ್ಲ. ಮಧ್ಯಪ್ರವೇಶಿಸಿದ ಆರ್`ಪಿಎಫ್ ಸಿಬ್ಬಂದಿ ಎಸಿ-2 ಬರ್ತ್`ನಲ್ಲಿ ಗಂಗೂಲಿ ಸೀಟ್ ಮಾಡಿಕೊಟ್ಟಿದ್ದಾರೆ.

ಬಲೂರ್ ಘಾಟ್`ನ ಬಿಕಾಶ್ ಮೈದಾನದಲ್ಲಿ ನಿರ್ಮಿಸಲಾಗಿದ್ದ ತಮ್ಮ 8 ಻ಡಿ ಉದ್ದದ ಕಂಚಿನ ಪ್ರತಿಮೆ ಉದ್ಘಾಟನೆಗೆ ತೆರಳುತ್ತಿದ್ದ ವೇಳೆ ಸೌರವ್ ಗಂಗೂಲಿಗೆ ಈ ಕಹಿ ಅನುಭವವಾಗಿದೆ. ಟೀಮ್ ಇಂಡಿಯಾದಲ್ಲಿ ದಾದಾ ಎಂದೇ ಕರೆಯಲ್ಪಡುತ್ತಿದ್ದ ಸೌರವ್ ಗಂಗೂಲಿ, 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್`ಗೆ ವಿದಾಯ ಹೇಳಿದ್ದರು. ಪಶ್ಚಿಮ ಬಂಗಾಳ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿರುವ ಗಂಗೂಲಿ, ಟೀಮ್ ಇಂಡಿಯಾ ಸಲಹಾ ಸಮಿತಿಯ ಸದಸ್ಯರೂ ಹೌದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ