ವಿಚಿತ್ರ ಆದ್ರೂ ಸತ್ಯ: ದಿನದಲ್ಲಿ ಸರಕಾರಿ ಶಾಲೆ, ರಾತ್ರಿ ಡಾನ್ಸ್ ಬಾರ್

ಗುರುವಾರ, 10 ಆಗಸ್ಟ್ 2017 (16:56 IST)
ಗ್ರಾಮ ಪಂಚಾಯತಿಯ ಮುಖ್ಯಸ್ಥನ ಪುತ್ರನ ಜನ್ಮದಿನಾಚರಣೆಗಾಗಿ ಸರಕಾರಿ ಶಾಲೆಯಲ್ಲಿ ಯುವತಿಯರ ಅಶ್ಲೀಲ ಡಾನ್ಸ್ ಬಾರ್ ಕಾರ್ಯಕ್ರಮ ನಡೆಸಿರುವುದು ಶಿಕ್ಷಣ ಇಲಾಖೆಯಲ್ಲಿ ಆಕ್ರೋಶ ಮೂಡಿಸಿದೆ.
ಸರಕಾರಿ ಶಾಲೆಯಲ್ಲಿ ನಡೆದ ಡಾನ್ಸ್ ಬಾರ್ ಕಾರ್ಯಕ್ರಮದಲ್ಲಿ ಯುವತಿಯರು ಅಶ್ಲೀಲ ನೃತ್ಯದಲ್ಲಿ ತೊಡಗಿದ್ದರೆ, ಇಬ್ಬರು ಪುರುಷರು ಯುವತಿಯರಿಗೆ ಹಣ ಹಂಚುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
 
ಜಮಾಲ್ಪುರ್ ಗ್ರಾಮದಲ್ಲಿರುವ ತೇತ್ರೈಹಿಯಾ ಕಲಾ ಖುರ್ದ್ ಪ್ರಾಥಮಿಕ ಶಾಲೆಗೆ ರಕ್ಷಾ ಬಂಧನದ ಅಂಗವಾಗಿ ರಜೆ ಘೋಷಿಸಲಾಗಿತ್ತು. ಆದರೆ, ಮಾರನೇ ದಿನ ಶಾಲೆಗೆ ಬಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಆಘಾತ ಕಾದಿತ್ತು. ಶಾಲೆಯ ಆವರಣದ ತುಂಬೆಲ್ಲಾ ಮದ್ಯದ ಬಾಟಲಿಗಳು ಬಿದ್ದಿರುವುದು ಕಂಡು ಬಂದಿತ್ತು.ವಿದ್ಯಾರ್ಥಿಗಳೊಂದಿಗೆ ಅದನ್ನು ಸ್ವಚ್ಛಗೊಳಿಸಬೇಕಾಯಿತು.
 
ಶಿಕ್ಷಕರು ವಿಚಾರಣೆ ನಡೆಸಿದಾಗ,  ಗ್ರಾಮದ ಮುಖ್ಯಸ್ಥರಾದ ರಾಮಕೇಶ್ ಯಾದವ್ ತನ್ನ ಮಗನ ಹುಟ್ಟುಹಬ್ಬವನ್ನು ಆಚರಿಸಲು ಒಂದು ಪಾರ್ಟಿಯನ್ನು ಏರ್ಪಡಿಸಿದ್ದರು ಎಂದು ತಿಳಿದುಬಂದಿದೆ.
 
ಘಟನೆಯ ಬಗ್ಗೆ ಸಹಾಯಕ ಶಿಕ್ಷಕ ಅಶೋಕ್ ಕುಮಾರ್ ಮೂಲಭೂತ ಶಿಕ್ಷಾ ಅಧಿಕಾರಿ (ಬಿಎಸ್ಎ) ಪ್ರವೀಣ್ ಕುಮಾರ್ ತಿವಾರಿಯನ್ನು ಮಾಹಿತಿ ನೀಡಿದರು. ಅದರ ಅನುಸಾರ ತನಿಖೆ ನಡೆಸಲು ಮೂಲ ಶಿಕ್ಷಣ ಅಧಿಕಾರಿಗಳಿಗೆ ತಿವಾರಿ ನಿರ್ದೇಶನ ನೀಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ