ಶಾಲೆಯಲ್ಲಿ ಬಾಲಕಿ ಸುಟ್ಟು ಕರಕಲಾದ ಘಟನೆಗೆ ಟ್ವಿಸ್ಟ್?
ಊಟದ ವಿರಾಮದ ವೇಳೆ ಮನೆಗೆ ಹೋಗಬೇಕಿದ್ದ ಬಾಲಕಿ ಅಡುಗೆ ಮನೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆ ಮನೆಗೆ ಬಾರದೇ ಇದ್ದಿದ್ದರಿಂದ ಗಾಬರಿಗೊಂಡ ಪೋಷಕರು ಶಾಲೆಗೆ ಹುಡುಕಿಕೊಂಡು ಬಂದಿದ್ದರು.
ಆಕೆಗೆ ಬೇಕೆಂದೇ ಯಾರಾದರೂ ಹೀಗೆ ಮಾಡಿದ್ದಾರಾ ಅಥವಾ ಅಕಸ್ಮತ್ತಾಗಿ ಈ ಘಟನೆ ನಡೆದಿದೆಯೇ ಎಂಬ ಅನುಮಾನ ಇದೀಗ ಮೂಡಿದೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿರಬಹುದು ಎಂಬುದು ಸ್ಥಳೀಯರ ಅನುಮಾನ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.