ಮುಂದಿನ ವರ್ಷ ಶಾಲೆಗಳಲ್ಲಿ NEP ಜಾರಿ: ನಾಗೇಶ್

ಗುರುವಾರ, 16 ಡಿಸೆಂಬರ್ 2021 (14:18 IST)
ಬೆಳಗಾವಿ : ರಾಜ್ಯದಲ್ಲಿ ಮುಂದಿನ ವರ್ಷ ಕೆಲ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEP) ಜಾರಿಗೊಳಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ವಿಧಾನಸಭೆಯಲ್ಲಿ ಮಹಾಂತೇಶ್ ಕೌಜಲಗಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಪ್ರಕ್ರಿಯೆ ಈಗಾಗಲೇ ರಾಜ್ಯದಲ್ಲಿ ಚಾಲ್ತಿಯಲ್ಲಿದೆ. ಅನುಷ್ಠಾನ ಕಾರ್ಯಪಡೆಯ ಶಿಫಾರಸಿನಂತೆ ಹಂತ ಹಂತವಾಗಿ ಸಂಪೂರ್ಣ ಜಾರಿಗೊಳಿಸಲಾಗುವುದು.

ಪ್ರಾಥಮಿಕ ಹಂತದ ಶಿಕ್ಷಣ ಮಾತ್ರ ಆರಂಭಿಸುತ್ತೇವೆ ಎಂದು ಉತ್ತರಿಸಿದ್ದಾರೆ.  NEP ಅನುಷ್ಠಾನ ಹಂತದಲ್ಲಿ ವಿವಿಧ ವಿಷಯಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ನೇಮಕಾತಿಗೆ ಕ್ರಮವಹಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ ಕೌಜಲಗಿ ಅವರು, ಒಮ್ಮಿಂದೊಮ್ಮೆಯೇ ಜಾರಿಯಾದರೆ ಸಮಸ್ಯೆಯಾಗುತ್ತದೆ. ಪೂರ್ವತಯಾರಿಯಿಲ್ಲದೆ ಆರಂಭ ಮಾಡುವುದು ಬೇಡ ಎಂದರು.

ಇದಕ್ಕುತ್ತರಿಸಿದ ಸಚಿವರು, ಟಾಟಾ ಸಂಸ್ಥೆ ಮೂಲಕ ಈಗಾಗಲೇ ತರಬೇತಿ ಆರಂಭವಾಗಿದೆ. ತರಬೇತಿ ನೀಡದೇ NEP ಜಾರಿ ಮಾಡಲ್ಲ ಎಂದು ಭರವಸೆ ನೀಡಿದರು. 2030ರೊಳಗೆ NEP ಸಂಪೂರ್ಣವಾಗಿ ಜಾರಿಗೊಳಿಸಲು ಹೇಳಿದ್ದಾರೆ. ಆದರೆ ತುಂಬಾ ಶಿಕ್ಷಕರ ಕೊರತೆಯಾಗಲ್ಲ ಎಂದು ಹೇಳಿದರು.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ