ಬಸ್ ಪಲ್ಟಿ ಶಾಲಾ ವಿದ್ಯಾರ್ಥಿಗಳ ದುರ್ಮರಣ!

ಸೋಮವಾರ, 12 ಡಿಸೆಂಬರ್ 2022 (09:31 IST)
ಮುಂಬೈ : ಪಿಕ್ನಿಕ್ ಮುಗಿಸಿ ಹಿಂದಿರುಗುತ್ತಿದ್ದ ಶಾಲಾ ಬಸ್ ಪಲ್ಟಿಯಾಗಿ ಇಬ್ಬರು ವಿದ್ಯಾರ್ಥಿಗಳು ದುರ್ಮರಣಕ್ಕೀಡಾಗಿದ್ದು, ಹಲವರು ಗಾಯಗೊಂಡಿರುವ ಘಟನೆ ಮುಂಬೈ ಬಳಿ ಇಂದು ಬೆಳಗ್ಗಿನ ಜಾವ ನಡೆದಿದೆ.

ಕೋಚಿಂಗ್ ತರಗತಿ ವಿದ್ಯಾರ್ಥಿಗಳು ಪಿಕ್ನಿಕ್ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ರಾಯಗಢ ಜಿಲ್ಲೆಯ ಖೋಪೋಲಿ ಎಂಬಲ್ಲಿ ದುರಂತ ಸಂಭವಿಸಿದೆ. 

ಮುಂಬೈನ ಚೆಂಬೂರ್ನಲ್ಲಿರುವ ಕೋಚಿಂಗ್ ಕೇಂದ್ರದ 10ನೇ ತರಗತಿಯ 48 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ಪ್ರಯಾಣಿಸುತ್ತಿದ್ದ ಬಸ್ ಲೋನಾವಾಲಾದಿಂದ ಹಿಂತಿರುಗುತ್ತಿತ್ತು. ಮುಂಬೈ-ಪುಣೆ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬೆಟ್ಟದಿಂದ ಇಳಿಯುತ್ತಿದ್ದ ವೇಳೆ ಬಸ್ ಪಲ್ಟಿಯಾಗಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ