ಅದಾನಿ ಗ್ರೂಪ್ ಬಗ್ಗೆ ಸೆಬಿ ಸ್ಪಷ್ಟನೆ ನೀಡಬೇಕು : ಹರೀಶ್ ಸಾಳ್ವೆ
ಮಾಧ್ಯಮದ ಜೊತೆ ಮಾತನಾಡಿದ ಅವರು, ಗೌತಮ್ ಆದಾನಿ ಅವರನ್ನು ಕರೆದು ಪ್ರತಿಕ್ರಿಯೆ ಪಡೆಯಬೇಕು. ಬಳಿಕ ಕೆಲ ಕ್ಷೇತ್ರಗಳಲ್ಲಿ ಕಾಳಜಿ ಇದೆ ಅಥವಾ ಈ ವರದಿ ಅಸಂಬದ್ಧ ಎಂದು ಸ್ಪಷ್ಟಪಡಿಸಬೇಕು ಎಂದು ಹೇಳಿದರು.
ಭಾರತದ ಉದ್ಯಮಿಗಳು ಈಗ ಜಗತ್ತಿನಲ್ಲಿ ಅಸ್ತಿತ್ವ ಹೊಂದಿದ್ದಾರೆ. ಇದನ್ನು ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಭಾರತದಲ್ಲಿ ಹೂಡಿಕೆ ಮಾಡಲು ನಾವು ಬ್ರಿಟಿಷ್ ಉದ್ಯಮಿಗಳನ್ನು ಓಲೈಸುವ ಸಮಯವಿತ್ತು. ಈಗ ಬ್ರಿಟಿಷ್ ಸರ್ಕಾರವು ಯುಕೆಯಲ್ಲಿ ಹೂಡಿಕೆ ಮಾಡಲು ಭಾರತೀಯರನ್ನು ಓಲೈಸುವುದನ್ನು ನಾವು ನೋಡಬಹುದು ಎಂದು ತಿಳಿಸಿದರು.