ಇಸ್ರೇಲಿನ ಹೈಫಾ ಬಂದರು ಅದಾನಿ ತೆಕ್ಕೆಗೆ

ಬುಧವಾರ, 1 ಫೆಬ್ರವರಿ 2023 (11:11 IST)
ಹೈಫಾ : ಇಸ್ರೇಲಿನ ಎರಡನೇ ಅತಿದೊಡ್ಡ ಹೈಫಾ ಬಂದರನ್ನು ಅದಾನಿ ಸಮೂಹ 1.2 ಶತಕೋಟಿ ಡಾಲರ್ಗೆ ಸ್ವಾಧೀನಪಡಿಸಿದೆ.

ಟೆಲ್ ಅವೀವ್ ನಲ್ಲಿ ಕೃತಕ ಬುದ್ಧಿಮತ್ತೆ ಪ್ರಯೋಗಾಲಯವೂ ಸೇರಿದಂತೆ ಇಸ್ರೇಲ್ನಲ್ಲಿನ ಹೂಡಿಕೆಯ ನಿರ್ಧಾರ ಭಾಗವಾಗಿ ಅದಾನಿ ಸಮೂಹ ಈ ಹೈಫಾ ಬಂದರು ಅಭಿವೃದ್ಧಿ ಒಪ್ಪಂದಕ್ಕೆ ಮುಂದಾಗಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಗೌತಮ್ ಅದಾನಿ ಜೊತೆಯಾಗಿ ಹೈಫಾ ಬಂದರನ್ನು ಸ್ವಾಧೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿ ಹೂಡಿಕೆ ಅವಕಾಶಗಳ ಬಗ್ಗೆ ಮಾತನಾಡಿದ್ದಾರೆ.

ಅದಾನಿ ಗ್ರೂಪ್ನೊಂದಿಗಿನ ಹೈಫಾ ಬಂದರು ಒಪ್ಪಂದ ದೊಡ್ಡ ಮೈಲಿಗಲ್ಲು ಎಂದು ಬಣ್ಣಿಸಿದ ಪ್ರಧಾನಿ ನೆತನ್ಯಾಹು, ಇದು ಉಭಯ ದೇಶಗಳ ನಡುವಿನ ಸಂಪರ್ಕವನ್ನು ಹಲವು ವಿಧಗಳಲ್ಲಿ ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಹೇಳಿದರು. 

ಕಂಟೈನರ್ ಹಡಗು ವಿಷಯದಲ್ಲಿ ಹೈಫಾ ಬಂದರು ಇಸ್ರೇಲ್ನಲ್ಲಿ ಎರಡನೇ ಅತಿದೊಡ್ಡ ಬಂದರಾಗಿದ್ದು ಪ್ರವಾಸಿ ಕ್ರೂಸ್ ಹಡಗುಗಳು ದೊಡ್ಡ ಪ್ರಮಾಣದಲ್ಲಿ ಈ ಬಂದರಿಗೆ ಬರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ