ಸರ್ಕಾರವನ್ನು ಟೀಕಿಸಿದ ಮಾತ್ರಕ್ಕೆ ರಾಜದ್ರೋಹದ ಆರೋಪ ಹೊರಿಸುವಂತಿಲ್ಲ: ಸುಪ್ರೀಂಕೋರ್ಟ್

ಮಂಗಳವಾರ, 6 ಸೆಪ್ಟಂಬರ್ 2016 (18:30 IST)
ಸರ್ಕಾರ ಅಥವಾ ಅದರ ನೀತಿಗಳ ವಿರುದ್ಧ ಧ್ವನಿ ಎತ್ತಿದ ಮಾತ್ರಕ್ಕೆ ಆ ವ್ಯಕ್ತಿಯ ವಿರುದ್ಧ ರಾಜದ್ರೋಹದ ಆರೋಪಗಳನ್ನು ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ. ಅನೇಕ ಪ್ರಕರಣಗಳಲ್ಲಿ ರಾಜದ್ರೋಹದ ಆರೋಪಗಳನ್ನು ಹೇರಿದ ಬಳಿಕ ಉದ್ಭವಿಸಿದ ವಿವಾದದಿಂದ, ಕಾನೂನನ್ನು ರದ್ದುಗೊಳಿಸಬೇಕೆಂಬ ಬೇಡಿಕೆಗಳಿಗೆ ಕಿಡಿ ಹೊತ್ತಿದ ಬಳಿಕ ಸುಪ್ರೀಂಕೋರ್ಟ್‌‍ಗೆ ಸ್ಪಷ್ಟನೆ ನೀಡುವುದು ಅಗತ್ಯವಾಗಿ ಕಂಡುಬಂದಿದೆ.
 
 ಸುಪ್ರೀಂಕೋರ್ಟ್ ರಾಜದ್ರೋಹದ ಕಾನೂನಿನ ವಿವಾದವನ್ನು 1962ರಲ್ಲಿ ಇತ್ಯರ್ಥ ಮಾಡಿದ್ದು, ಯಾವ ಸಂದರ್ಭಗಳಲ್ಲಿ ರಾಜದ್ರೋಹದ ನಿಯಮ ಬಳಸಬೇಕೆಂದು ಸ್ಪಷ್ಟನೆ ನೀಡಿರುವುದಾಗಿ ದೀಪಕ್ ಮಿಶ್ರಾ ಮತ್ತು ಯುಯು ಲಲಿತ್ ಅವರಿದ್ದ ನ್ಯಾಯಪೀಠ ತಿಳಿಸಿತು.

ಕೇದಾರ್ ನಾಥ್ ವಿರುದ್ಧ ಬಿಹಾರ ರಾಜ್ಯದ ಪ್ರಕರಣದಲ್ಲಿ ಸಂವಿಧಾನ ಪೀಠ ಮಂಡಿಸಿದ ನಿಯಮಗಳನ್ನು ಪಾಲಿಸಬೇಕು ಎಂದು ಪೀಠವು ಹೇಳಿದೆ. 54 ವರ್ಷಗಳ ಹಿಂದೆ ಸಂವಿಧಾನ ಪೀಠ ರೂಪಿಸಿದ ಮಾರ್ಗದರ್ಶಿಗಳು ಪ್ರಸ್ತುತ ಸಂದರ್ಭದಲ್ಲಿ ಸೂಕ್ತವಾಗಿದೆ ಎಂದು ಹೇಳಿದ ಪೀಠವು ರಾಜದ್ರೋಹದ ವಿಷಯವನ್ನು ಮರುಪರಿಶೀಲನೆ ಮಾಡಲು ನಿರಾಕರಿಸಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

ವೆಬ್ದುನಿಯಾವನ್ನು ಓದಿ