ಅಕ್ರಮ ಸಂಬಂಧ ಶಂಕೆ: ವ್ಯಕ್ತಿ ಜತೆ ಪತ್ನಿ ಮಾತನಾಡುತ್ತಿರುವಾಗಲೇ ಎಂಟ್ರಿ ಕೊಟ್ಟ ಪತಿ, ಆಗಿದ್ದೆ ಬೇರೆ

Sampriya

ಶುಕ್ರವಾರ, 4 ಜುಲೈ 2025 (14:37 IST)
ಅಕ್ರಮ ಸಂಬಂಧದ ಶಂಕೆಯ ಮೇರೆಗೆ ಪತ್ನಿಯನ್ನು ಬರ್ಬರವಾಗಿ ಕೊಂದ ಘಟನೆ ತಮಿಳುನಾಡಿನ ಅವಡಿ ಜಿಲ್ಲೆಯಲ್ಲಿನಡೆದಿದೆ.  ಮೃತಳನ್ನು ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಗೆ ಸೇರಿದ ಮಹಿಳಾ ಕೌನ್ಸಿಲರ್‌ ಎಂದು ಗುರುತಿಸಲಾಗಿದೆ. 

ತಿರುನಿನ್ರವೂರ್ ಪ್ರದೇಶದ ಜಯರಾಮ್ ನಗರದ ಬಳಿ ಸಂತ್ರಸ್ತೆ ಗೋಮತಿ ವ್ಯಕ್ತಿಯೊಬ್ಬನ ಜತೆ ನಿಂತು ಮಾತನಾಡುತ್ತಿರುವುದನ್ನು ನೋಡಿದ್ದಾನೆ. 

ಗೋಮತಿ ಪತಿ ಸ್ಟೀಫನ್ ರಾಜ್‌ ಪತ್ನಿ ಜತೆ ಜಗಳವಾಡಿದ್ದಾನೆ. ಕೋಪ ವಿಕೋಪಕ್ಕೆ ತಿರುಗಿ ಹಠಾತ್ ಹಿಂಸಾಚಾರದಲ್ಲಿ ಸ್ಟೀಫನ್ ರಾಜ್ ಚಾಕು ತೆಗೆದುಕೊಂಡು ಗೋಮತಿಯ ಮೇಲೆ ಪದೇ ಪದೇ ಹಲ್ಲೆ ನಡೆಸಿದ್ದಾನೆ. ಆಕೆ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಘಟನೆಯ ನಂತರ ಸ್ಟೀಫನ್ ರಾಜ್ ತಿರುನಿನ್ರವೂರ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು, ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಪೊಲೀಸರು ಆತನನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ