ಉದ್ಯಮಿಯ ದೂರಿನ ಪ್ರತಿ ನೋಡಿ ದಂಗಾದ ಪೊಲೀಸರು

ಮಂಗಳವಾರ, 19 ನವೆಂಬರ್ 2019 (08:45 IST)
ಚೆನ್ನೈ : ಉದ್ಯಮಿಯೊಬ್ಬರು ತಮ್ಮ ಬ್ರಾಂಡೆಡ್ ಶೂಗಳು ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ ಘಟನೆ ಚೆನ್ನೈ ನಲ್ಲಿ ನಡೆದಿದೆ.




ಚೆನ್ನೈನ ದಿವಾನ್ ಬಹದ್ದೂರ್ ಷಣ್ಮುಗಮ್ ಬೀದಿಯ ನಿವಾಸಿ ಅಬ್ದುಲ್ ಹಫೀಜ್ ಎಂಬುವವರ ಬಳಿ 10 ಜೊತೆ ಬ್ರಾಂಡೆಡ್ ಶೂಗಳಿದ್ದು, ಅವುಗಳು ಇದ್ದಕ್ಕಿದ್ದಂತೆ ಕಾಣೆಯಾಗಿವೆ. ಅವುಗಳ ಬೆಲೆ ಬರೋಬ್ಬರಿ 76 ಸಾವಿರ ರೂ.ಗಳಾಗಿದ್ದ ಕಾರಣ ಇದರಿಂದ ಕಂಗೆಟ್ಟ ಉದ್ಯಮಿ ಶೂಗಳನ್ನು ಹುಡುಕಿ ಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದಾನೆ.


ಇತನ ದೂರಿನ ಪ್ರತಿ ನೋಡಿ ಪೊಲೀಸರೇ ಒಂದು ಕ್ಷಣ ದಂಗಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲಿಸರು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ