ಹೆಂಡತಿಯೊಂದಿಗೆ ಜಗಳಕ್ಕಿಳಿದ ಗಂಡ ಕೋಪದಿಂದ ಮಾಡಿದ್ದೇನು ಗೊತ್ತಾ?

ಸೋಮವಾರ, 18 ನವೆಂಬರ್ 2019 (06:21 IST)
ವಾಷಿಂಗ್ಟನ್ : ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಮೂರು ಮಕ್ಕಳು ಹಾಗೂ ಪತ್ನಿಗೆ ಶೂಟ್ ಮಾಡಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮೇರಿಕಾದ ಆಗ್ನೇಯ ಸ್ಯಾನ್ ಡಿಯಾಗೋದಲ್ಲಿ ನಡೆದಿದೆ.




ಕೌಟುಂಬಿಕ ವಿಚಾರಕ್ಕೆ ಆಗಾಗ ಜಗಳವಾಡುತ್ತಿದ್ದ ಗಂಡ ನಿನ್ನೆ ಬೆಳಿಗ್ಗೆ ಮತ್ತೆ ಜಗಳ ಶುರು ಮಾಡಿದ್ದಾನೆ. ಬಳಿಕ ಈ ಜಗಳ ತಾರಕಕ್ಕೇರಿ ಮನೆಯಲ್ಲಿದ್ದ ಹ್ಯಾಂಡ್ ಗನ್ ನಿಂದ ತನ್ನ 5,9, ಮತ್ತು 11 ವರ್ಷದ ಮೂರು ಮಕ್ಕಳ ಜೊತೆಗೆ ಹೆಂಡತಿಗೂ ಶೂಟ್ ಮಾಡಿ ಕೊಲೆ ಮಾಡಿದ್ದಾನೆ. ಬಳಿಕ ತಾನು ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಗನ್ ಸೌಂಡ್ ಕೇಳಿ ಅಲ್ಲಿಗೆ ಬಂದ ನೆರೆಹೊರೆಯವರು ಆ ಭಯಾನಕ ದೃಶ್ಯ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಅಲ್ಲಿ ಒಂದು ಮಗು ಬದುಕಿದ್ದು, ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ