ಆಧಾರ್ ಕಾರ್ಡ್ ಕುರಿತು ದೀಪಕ್ ಮಿಶ್ರಾ ಮಹತ್ವದ ತೀರ್ಪು ಇಲ್ಲಿದೆ ನೋಡಿ

ಬುಧವಾರ, 26 ಸೆಪ್ಟಂಬರ್ 2018 (14:14 IST)
ನವದೆಹಲಿ : ಸಿಜೆಐ ದೀಪಕ್ ಮಿಶ್ರಾ ಅವರು ನಿವೃತ್ತಿ(ಅ.2 ರಂದು)ಗೂ ಮುನ್ನ ಮಹತ್ವದ ಪ್ರಕರಣಗಳಿಗೆ ತೀರ್ಪನ್ನು ನೀಡುತ್ತಿದ್ದು, ಇದರಲ್ಲಿ ಒಂದಾದ ಆಧಾರ್ ಸಿಂಧುತ್ವ ಕುರಿತ ಪ್ರಕರಣಕ್ಕೆ ಇಂದು ಐವರು ಸದಸ್ಯರನ್ನೊಳಗೊಂಡ ಪೀಠ ಮಹತ್ವದ ತೀರ್ಪನ್ನು ನೀಡಿದ್ದು, ಈ ಮೂಲಕ ಆಧಾರ್ ಸಾಂವಿಧಾನಿಕ ಮಾನ್ಯತೆಯನ್ನು ಕೋರ್ಟ್ ಎತ್ತಿಹಿಡಿದಿದೆ.


ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚಸದಸ್ಯ ಪೀಠ ಈ ಪ್ರಕರಣದ ವಿಚಾರಣೆಯನ್ನು ಕಳೆದ ಮಾರ್ಚ್ ತಿಂಗಳಿನಿಂದ ಆರಂಭಿಸಿತ್ತು. 12 ಅಂಕಿಗಳ ಆಧಾರ್ ಸಂಖ್ಯೆಯನ್ನು ಬಹುಮುಖ್ಯ ದಾಖಲೆಗಳೊಂದಿಗೆ ಜೋಡಿಸುವುದರಿಂದ ಖಾಸಗಿ ಮಾಹಿತಿ ಸೋರಿಕೆಯಾಗುವ ಸಂಭವವಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದಿದೆ. ಖಾಸಗೀತನ ಮೂಲಭೂತ ಹಕ್ಕು ಎಂದು ಈಗಾಗಲೇ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿರುವುದು ಆಧಾರ್ ಕಡ್ಡಾಯ ಕ್ರಮದಿಂದ ಖಾಸಗೀತನಕ್ಕೆ ಧಕ್ಕೆಯಾಗುತ್ತದೆ ಎಂಬ ಆರೋಪಕ್ಕೆ ಪುಷ್ಟಿ ನೀಡಿದಂತಾಗಿತ್ತು.


ಸುಪ್ರೀಂ ಕೋರ್ಟ್ ಆದೇಶದಂತೆ ಆಧಾರ್ ಯಾವುದಕ್ಕೆ ಕಡ್ಡಾಯ/ ಯಾವುದಕ್ಕೆ ಕಡ್ಡಾಯವಲ್ಲ ಎಂಬ ಮಾಹಿತಿ ಇಲ್ಲಿದೆ ನೋಡಿ
ಇವುಗಳಿಗೆ ಆಧಾರ್ ಕಡ್ಡಾಯ:

ಸರ್ಕಾರದ ಯೋಜನೆಗಳಿಗೆ ಆಧಾರ್ ಕಡ್ಡಾಯ.

ಪಾನ್ ಕಾರ್ಡ್ ನೊಂದಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ.

ಆದಾಯ ತೆರಿಗೆ ಪಾವತಿಗೂ ಆಧಾರ್ ಜೋಡಣೆ ಕಡ್ಡಾಯ.

ಇವುಗಳಿಗೆ ಆಧಾರ್ ಕಡ್ಡಾಯವಲ್ಲ:

ಬ್ಯಾಂಕ್ ಖಾತೆಗೆ ಆಧಾರ್ ಕಡ್ಡಾಯವಲ್ಲ.

ಮೊಬೈಲ್ ನಂಬರ್ ಗೆ ಆಧಾರ್ ಜೋಡಣೆ ಕಡ್ಡಾಯವಲ್ಲ.

ಶಾಲಾ-ಕಾಲೇಜುಗಳಲ್ಲಿ ಆಧಾರ್ ಕಡ್ಡಾಯವಲ್ಲ.

ಸಿಬಿಎಸ್‌ಇ, ನೀಟ್, ಯುಜಿಸಿಗೆ ಆಧಾರ್ ಕಡ್ಡಾಯವಲ್ಲ.

ಮೊಬೈಲ್ ಫೋನ್ ಗಳಿಗೆ ಆಧಾರ್ ಕಡ್ಡಾಯವಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ