ವಿವಾಹಿತ ವ್ಯಕ್ತಿಯಿಂದ ಮಾನಸಿಕ ಕಿರುಕುಳ ; ಆತ್ಮಹತ್ಯೆ ಗೆ ಶರಣಾದ ವಿದ್ಯಾರ್ಥಿನಿ
ಸೋಮವಾರ, 24 ಸೆಪ್ಟಂಬರ್ 2018 (07:12 IST)
ನವದೆಹಲಿ : ಶಾಲೆಗೆ ಹೋಗುವಾಗ ವಿವಾಹಿತ ವ್ಯಕ್ತಿಯೊಬ್ಬ ಕಿರುಕುಳ ನೀಡುತ್ತಿರುವ ಹಿನ್ನಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯ ಸುಲ್ತಾನ್‍ಪುರಿಯಲ್ಲಿ ನಡೆದಿದೆ.
ಈ ಬಾಲಕಿ ಶಾಲೆಗೆ ಹೋಗುತ್ತಿರುವಾಗ ಸ್ಥಳೀಯ ವಿವಾಹಿತ ವ್ಯಕ್ತಿಯೊಬ್ಬ ಆಕೆಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ಅಷ್ಟೇ ಅಲ್ಲದೆ ಬಾಲಕಿಯ ಜೊತೆಗೆ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದ ಆಕೆಯ ಸಹೋದರರನ್ನು ಥಳಿಸಿದ್ದ. ಆತನ ಈ ವರ್ತನೆಯಿಂದ ಮನನೊಂದ ಬಾಲಕಿ ಸೆಪ್ಟೆಂಬರ್ 19ರಂದು ಮನೆಯ ಫ್ಯಾನ್‍ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಕುರಿತು ಬಾಲಕಿಯ ಪೋಷಕರು ಶನಿವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.