ಚಿಕಿತ್ಸೆಗಾಗಿ ಬಂದ ತಾಯಿ- ಮಗಳ ಮೇಲೆ ಅತ್ಯಾಚಾರ ಎಸಗಿದ ಸ್ವಯಂ ಘೋಷಿತ ದೇವಮಾನವ

ಮಂಗಳವಾರ, 11 ಸೆಪ್ಟಂಬರ್ 2018 (07:34 IST)
ನವದೆಹಲಿ : ಸ್ವಯಂ ಘೋಷಿತ ದೇವಮಾನವನೊಬ್ಬ ತನ್ನ ಬಳಿ ಚಿಕಿತ್ಸೆಗಾಗಿ ಬಂದ ತಾಯಿ-ಮಗಳ ಮೇಲೆ ಅತ್ಯಾಚಾರವೆಸಗಿದ್ದ ಘಟನೆ ನವದೆಹಲಿಯ ಹೌಜ್ಖಾಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ.


ಆಶೂ ಭಾಯ್ ಗುರೂಜಿ ಎಂಬಾತ ಸ್ವಯಂ ಘೋಷಿತ ದೇವಮಾನವನಾಗಿದ್ದು, ಆತನ ಬಳಿ  ಮಹಿಳೆಯೊಬ್ಬಳು ತನ್ನ ಮಗಳ ಚಿಕಿತ್ಸೆಗಾಗಿ ಬಂದಿದ್ದಾಗ ತಾಯಿ ಹಾಗೂ ಮಗಳ ಮೇಲೆ ಅತ್ಯಾಚಾರವೆಸಗಿದ್ದ ಎಂಬುದಾಗಿ ವರದಿಯಾಗಿದೆ.


ಅಷ್ಟೇ ಅಲ್ಲದೇ ಆಶೂ ಭಾಯ್ ಗುರೂಜಿಯ ಪುತ್ರ ಹಾಗೂ ಆತನ ಸ್ನೇಹಿತರೂ ಸಹ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆನ್ನಲಾಗಿದೆ. ಈ ಬಗ್ಗೆ ಮಹಿಳೆ ಹೌಜ್ಖಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ