ಹರಿದ ನೋಟುಗಳ ಬದಲಾವಣೆಗೆ ಆರ್‌ಬಿಐನಿಂದ ಹೊಸ ನಿಯಮ ಜಾರಿ

ಸೋಮವಾರ, 10 ಸೆಪ್ಟಂಬರ್ 2018 (08:41 IST)
ನವದೆಹಲಿ : ಹಳೆ ನೋಟು ರದ್ದಾದ ನಂತರದಲ್ಲಿ ಆರ್ ಬಿಐ ಬಿಡುಗಡೆ ಮಾಡಿದ ಹೊಸ ನೊಟುಗಳ ಬದಲಾವಣೆಗೆ ಆರ್‌ಬಿಐ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ.


ಈ ಮೊದಲು 2000ಮೌಲ್ಯದ ನೋಟಿನ ಬದಲಾವಣೆಗೆ ನಿಯಮವಿರಲಿಲ್ಲ. ಹಾಗಾಗಿ ಈ ನೋಟುಗಳ ಬದಲಾವಣೆ ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಮಹಾತ್ಮಗಾಂಧಿ ಚಿತ್ರವುಳ್ಳ ಸರಣಿಯ 2000 ರೂ , 500 ರೂ, 200 , 100 ರೂ, 50 ರೂ, 10 ರೂ, 20 ರೂ ಮುಖಬೆಲೆಯ ಹೊಸ ನೋಟುಗಳಲ್ಲಿ ಯಾವುದೇ ಸಮಸ್ಯೆ ಕಂಡು ಬಂದರೆ ಅದನ್ನು ಬದಲಾಯಿಸಬಹುದು.


ಹರಿದ ನೋಟುಗಳ ಪೂರ್ಣ ಅಥವಾ ಅರ್ಧ ಮೌಲ್ಯವನ್ನು ವಾಪಸ್ ಪಡೆಯಬಹುದಾಗಿದೆ. ಎಷ್ಟು ಅಳತೆಯಲ್ಲಿ ಹರಿದ ನೋಟುಗಳಿಗೆ ಎಷ್ಟು ಮೌಲ್ಯ ನೀಡಲಾಗುತ್ತದೆ ಎಂದು ಆರ್‌ಬಿಐ ನಿಯಮಾವಳಿ ಪ್ರಕಟಿಸಿದೆ. ಒಟ್ಟಿನಲ್ಲಿ ನೀವು ನೋಟುಗಳನ್ನು ಪಡೆದುಕೊಳ್ಳುವ ಮುನ್ನ ಎಚ್ಚರಿಕೆಯಿಂದ ಇರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ