ಅರುಣಾಚಲ: ಕಾಂಗ್ರೆಸ್ ಸಿಎಂ ಸೇರಿ 43 ಶಾಸಕರು ಬಿಜೆಪಿ ಮೈತ್ರಿಕೂಟಕ್ಕೆ

ಶುಕ್ರವಾರ, 16 ಸೆಪ್ಟಂಬರ್ 2016 (16:19 IST)
ಅರುಣಾಚಲ ಪ್ರದೇಶದ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಆಘಾತಕಾರಿ ಬೆಳವಣಿಗೆಗಳು ನಡೆದಿವೆ. ಸಿಎಂ ಪೇಮಾ ಖಾಂಡು ಸೇರಿದಂತೆ 43 ಶಾಸಕರು ಬಿಜೆಪಿ ಮೈತ್ರಿಕೂಟದ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದಾರೆ.
 
ಕಳೆದ ಎರಡು ತಿಂಗಳು ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ನಡೆದ ಬೆಳವಣಿಗೆಗಳಲ್ಲಿ ಪೇಮಾ ಖಾಂಡು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಇದೀಗ ತಮ್ಮೊಂದಿಗೆ 43 ಶಾಸಕರನ್ನು ಪಿಪಿಎ ಪಕ್ಷಕ್ಕೆ ಕರೆದುಕೊಂಡು ಹೋಗಿ ಪಿಪಿಎ ಸರಕಾರವಾಗಿ ಬದಲಾಯಿಸಿದ್ದಾರೆ.
 
11 ಶಾಸಕರನ್ನು ಹೊಂದಿರುವ ಬಿಜೆಪಿಯೊಂದಿಗೆ ಪಿಪಿಎ ಪಕ್ಷ ವಿಲೀನವಾಗುತ್ತದೆಯೋ ಎನ್ನುವುದನ್ನು ಕಾದು ನೋಡಬೇಕಾಗಿದೆ.
 
60 ಶಾಸಕರನ್ನು ಹೊಂದಿರುವ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ 47, ಬಿಜೆಪಿ 11 ಶಾಸಕರನ್ನು ಹೊಂದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ