ಸ್ಮಾರ್ಟ್ಫೋನ್ಗಳಿಗೆ ಏಕರೂಪದ ಚಾರ್ಜರ್

ಭಾನುವಾರ, 20 ನವೆಂಬರ್ 2022 (13:22 IST)
ನವದೆಹಲಿ : ದೇಶದಲ್ಲಿ ಇ-ತ್ಯಾಜ್ಯದ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸ್ಮಾರ್ಟ್ಫೋನ್ಗಳಿಗೂ ಏಕರೂಪದ ಚಾರ್ಜರ್ ಅನ್ನು ಕಡ್ಡಾಯಗೊಳಿಸಲು ಕೇಂದ್ರ ತೀರ್ಮಾನಿಸಿದೆ.
 
ಶೀಘ್ರವೇ ಈ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸುವ ಸಾಧ್ಯತೆಯಿದೆ. ಕಳೆದ ಕೆಲವು ವಾರಗಳಲ್ಲಿ ಭಾರತ ಸರ್ಕಾರ ವ್ಯಾಪಕ ಸಮಾಲೋಚನೆಯನ್ನು ನಡೆಸಿ, ಎಲ್ಲಾ ಸ್ಮಾರ್ಟ್ಫೋನ್ಗಳಿಗೂ ಒಂದೇ ರೀತಿಯ ಚಾರ್ಜರ್ ಅನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ.

ಈ ನೀತಿ ಜಾರಿಗೆ ಬಂದಲ್ಲಿ ಆಪಲ್ ಸೇರಿದಂತೆ ಎಲ್ಲಾ ಸ್ಮಾರ್ಟ್ಫೋನ್ ಕಂಪನಿಗಳು ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್ಗಳನ್ನೊಳಗೊಂಡ ಫೋನ್ಗಳನ್ನೇ ಉತ್ಪಾದಿಸಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ