ಸಂಜೇಶ್ ಯಾದವ್ (45 ವರ್ಷ) ಅನಾಥ ಬಾಲಕನ ಮೇಲೆ ಅಸಹಜ ಲೈಂಗಿಕ ದಾಳಿ ನಡೆಸಿದಾತ. ಈತ ಚಾಮದ್ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಒಂದು ದಿನ ಗಸ್ತು ವೇಳೆ ಹೋಟೆಲ್ವೊಂದಕ್ಕೆ ಭೇಟಿ ನೀಡಿದಾಗ ಆ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಅನಾಥ ಬಾಲಕ ಇತನ ಕಣ್ಣಿಗೆ ಬಿದ್ದಿದ್ದಾನೆ. ವಿಚಾರಣೆ ನೆಪದಲ್ಲಿ ಆ ಬಾಲಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ ಸಂಜೇಶ್ ಯಾದವ್ ಸೆಪ್ಟಂಬರ್ 9 ರಿಂದ ಅಕ್ಟೋಬರ್ 1ರವರೆಗೆ ಪ್ರತಿನಿತ್ಯ ಬಾಲಕನ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದನು.
ಆದರೆ ಗಾಂಧಿ ಜಯಂತಿ ನಿಮಿತ್ತ ಹಿರಿಯ ಪೊಲೀಸ್ ಅಧಿಕಾರಿಗಳು ಚಾಮದ್ ಠಾಣೆಗೆ ಭೇಟಿ ನೀಡಿದ್ದರು. ಈ ವೇಳೆ ಬಾಲಕ ತನ್ನ ನೋವುಗಳನ್ನು ತೋಡಿಕೊಂಡಿದ್ದಾನೆ. ಬಾಲಕ, ಲೈಂಗಿಕ ಕ್ರಿಯೆಗೆ ಗುರಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಕಾರಣ ಕೂಡಲೇ ಹಿರಿಯ ಅಧಿಕಾರಿಗಳು ಪೊಲೀಸ್ ಪೇದೆ ಸಂಜೇಶ್ನ್ನು ಅಮಾನತುಗೊಳಿಸಿ, ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.