ದೂರು ದಾಖಲಾಗಬೇಕಾದ್ರೆ ಶೂ ಪಾಲಿಶ್ ಮಾಡು ಎಂದ ಪೊಲೀಸ್ ಅಧಿಕಾರಿಗಳು

ಸೋಮವಾರ, 30 ಮೇ 2016 (13:29 IST)
ಉತ್ತರಪ್ರದೇಶ ಪೊಲೀಸರ ಕ್ರೂರ ಮುಖವಾಡ ಮತ್ತೊಮ್ಮೆ ಬಹಿರಂಗವಾಗಿದೆ. ಪೊಲೀಸ್ ಠಾಣೆಗೆ ದೂರು ಕೊಡಲು ಬಂದ ವ್ಯಕ್ತಿಯ ದೂರು ಸ್ವೀಕರಿಸದ ಪೊಲೀಸರು ಆತನಿಗೆ ಶೂ ಪಾಲಿಶ್ ಮಾಡುವಂತೆ ಒತ್ತಡ ಹೇರಿರುವ ಹೇಯ ಘಟನೆ ವರದಿಯಾಗಿದೆ.
 
ವರದಿಗಳ ಪ್ರಕಾರ, ಮುಜಾಫರ್ ಪೊಲೀಸ್ ಠಾಣೆಗೆ ವ್ಯಕ್ತಿಯೊಬ್ಬ ದೂರು ದಾಖಲಿಸಲು ಬಂದಾಗ ದೂರು ದಾಖಲಾಗಬೇಕಾದಲ್ಲಿ ಶೂ ಪಾಲಿಶ್ ಮಾಡುವಂತೆ ಆದೇಶಿಸಿದ್ದಾರೆ ಎನ್ನಲಾಗಿದೆ. 
 
ಪೊಲೀಸರ ಹೈಯ ಕೃತ್ಯದ ಬಗ್ಗೆ ವೈರಲ್ ಆದ ವಿಡಿಯೋದಲ್ಲಿ ಮೂವರು ಪೊಲೀಸರು ಪೊಲೀಸ್ ಠಾಣೆಯಲ್ಲಿ ಕುಳಿತುಕೊಂಡಿದ್ದರೆ, ವ್ಯಕ್ತಿ ಶೂ ಪಾಲಿಶ್ ಮಾಡುವಲ್ಲಿ ನಿರತನಾಗಿದ್ದಾನೆ.
 
ಸುದ್ದಿ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಶ್ ಕುಮಾರ್, ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. 
 
ದೂರು ದಾಖಲಿಸಲು ಬಂದ ವ್ಯಕ್ತಿಗೆ ಶೂ ಪಾಲಿಶ್ ಮಾಡುವಂತೆ ಒತ್ತಡ ಹೇರಿರುವುದು ಅನಾಗರಿಕ ಲಕ್ಷಣ. ಘಟನೆಯ ಬಗ್ಗೆ ತನಿಖೆ ನಡೆಸಲು ಉನ್ನತ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ಎಸ್‌.ಪಿ ಕುಮಾರ್ ತಿಳಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ