ನಿತೀಶ್ ಹಾದಿ ಹಿಡಿತಾರಾ ಶರದ್ ಪವಾರ್?

ಶನಿವಾರ, 12 ಆಗಸ್ಟ್ 2017 (10:28 IST)
ನವದೆಹಲಿ: ಬಿಜೆಪಿ ಸೋಲಿಸಲೆಂದು ಮಹಾಘಟಬಂದನ್ ಮಾಡಿಕೊಂಡಿದ್ದ ಕಾಂಗ್ರೆಸ್ ಗೇ ಕೈ ಕೊಟ್ಟು ಎನ್ ಡಿಎ ಪಾಳಯ ಸೇರಿಕೊಂಡ ನಿತೀಶ್ ಕುಮಾರ್ ಹಾದಿಯನ್ನೇ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಹಿಡಿಯುತ್ತಾರಾ? ಹಾಗೊಂದು ಅನುಮಾನ ಮೂಡಿಸಿದೆ.

 
ಬಿಜೆಪಿಯನ್ನು ಮಣಿಸಲು ಯುಪಿಎ ಕೂಟದ ರಾಜಕೀಯ ಪಕ್ಷಗಳು ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ ನಡೆಸಲಿದ್ದಾರೆ. ಆದರೆ ಈ ಮಹತ್ವದ ಸಭೆಗೆ ಹಾಜರಾಗದೇ ಇರಲು ಶರದ್ ಪವಾರ್ ನಿರ್ಧರಿಸಿದ್ದಾರೆ. ಇದನ್ನು ಬಿಜೆಪಿ ಸ್ವಾಗತಿಸಿದೆ.

ಇದಕ್ಕೂ ಮೊದಲು ನಡೆದ ರಾಷ್ಟ್ರಪತಿ ಚುನಾವಣೆಯಲ್ಲೂ ಶರದ್ ಪವಾರ್ ಕೊನೇ ಕ್ಷಣದಲ್ಲಿ ಯುಪಿಎಗೆ ಕೈಕೊಟ್ಟು ಎನ್ ಡಿಎ ಅಭ್ಯರ್ಥಿಗೆ ಮತ ಹಾಕಿದ್ದರು. ಇದನ್ನೆಲ್ಲಾ ಗಮನಿಸಿದರೆ ಪವಾರ್ ಕೂಡಾ ನಿತೀಶ್ ಮಾಡಿದಂತೆ ಯುಪಿಎಗೆ ಕೈ ಕೊಟ್ಟು ಎನ್ ಡಿಎ ಪಾಳಯ ಸೇರುತ್ತಾರಾ ಎಂಬ ಅನುಮಾನ ಮೂಡಿಸಿದೆ.

ಒಂದು ವೇಳೆ ಶರದ್ ಪವಾರ್ ಯುಪಿಎಗೆ ಕೈಕೊಟ್ಟರೆ ಅದು ಕಾಂಗ್ರೆಸ್ ಗೆ ದೊಡ್ಡ ಹೊಡೆತವಾಗಲಿದೆ. ಇದುವರೆಗೆ ಕಾಂಗ್ರೆಸ್ ಗೇ ಇದ್ದ ಎನ್ ಸಿಪಿ, ಯುಪಿಎ ಸರ್ಕಾರದಲ್ಲಿ ಬಹುದೊಡ್ಡ ಜವಾಬ್ದಾರಿ ಹೊಂದಿದ್ದ ಪವಾರ್ ಈಗ ಯುಪಿಎ ಕೂಟದಿಂದ ಹೊರಬಂದರೆ, ಆಪ್ತ ಮಿತ್ರ ಕೈ ಕೊಟ್ಟ  ಅನುಭವ ಕಾಂಗ್ರೆಸ್ ಗೆ ಆಗಲಿದೆ.

ಇದನ್ನೂ ಓದಿ… ಪಲ್ಲಿಕೆಲೆ ಟೆಸ್ಟ್: ಟೀಂ ಇಂಡಿಯಾಕ್ಕೆ ಬಂದ ಹಾಲುಗಲ್ಲದ ಹುಡುಗ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ