ಬಿಹಾರ್‌ನಲ್ಲಿ ಜೆಡಿಯು-ಬಿಜೆಪಿ ಮೈತ್ರಿ ದುರದೃಷ್ಟಕರ: ಶರದ್ ಯಾದವ್ ಕಿಡಿ

ಸೋಮವಾರ, 31 ಜುಲೈ 2017 (16:14 IST)
ಬಿಜೆಪಿಯೊಂದಿಗೆ ಮೈತ್ರಿಯಾಗಿ ಬಿಹಾರ್‌ ರಾಜ್ಯದಲ್ಲಿ ಸರಕಾರ ರಚಿಸಿರುವ ಬಗ್ಗೆ ಅಸಮಾಧಾನಗೊಂಡಿರುವ ಜೆಡಿಯು ಮಾಜಿ ಅಧ್ಯಕ್ಷ ಶರದ್ ಯಾದವ್ ಇದೀಗ ಮೌನ ಮುರಿದು ಇದೊಂದು ದುರದೃಷ್ಟಕರ ಘಟನೆ ಎಂದು ಹೇಳಿದ್ದಾರೆ. 
 
ಸಂಸತ್ತಿನ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರ್ ಜನತೆ ಇಂತಹ ಮೈತ್ರಿಗೆ ಬಹುಮತ ನೀಡಿರಲಿಲ್ಲ. ಇದೊಂದು ದುರದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
 
ನಿತೀಶ್ ಕುಮಾರ್ ಅವರು ಬಿಜೆಪಿಯೊಂದಿಗೆ ಒಗ್ಗೂಡಿಸಲು ನಿರ್ಧರಿಸಿದ ಮುಂಚೆ "ವಿಶ್ವಾಸ" ದಲ್ಲಿಲ್ಲ ಎಂದು ಯಾದವ್ ಕೂಡ "ಅಸಮಾಧಾನ" ಮಾಡಿದ್ದಾರೆ.
 
ಬಿಹಾರ್ ಸಿಎಂ ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮುಂಚೆ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಕಿಡಿಕಾರಿದರು. ಜೆಡಿಯು ಸಂಸದ ಅಲಿ ಅನ್ವರ್ ಮತ್ತು ವಿರೇಂದ್ರ ಕುಮಾರ್ ಕೂಡಾ ಬಿಹಾರ್ ಸಿಎಂ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
 
ಕೋಮುವಾದಿಗಳನ್ನು ಸೋಲಿಸಲು ಶರದ್ ಯಾದವ್ ರಾಷ್ಟ್ರವ್ಯಾಪಿ ಪ್ರವಾಸ ಕೈಗೊಳ್ಳಲಿ ಎಂದು ಆರ್‌ಜೆಡಿ ಲಾಲು ಪ್ರಸಾದ್ ಯಾದವ್ ಒತ್ತಾಯಿಸಿದ್ದಾರೆ.
 
ಕಳೆದ ವಾರ ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಜೆಡಿಯು ನಾಯಕ ಬಿಹಾರ್ ಸಿಎಂ ನಿತೀಶ್ ಕುಮಾರ್, ಆರ್‌ಜೆಡಿ ಮತ್ತು ಕಾಂಗ್ರೆಸ್‌ನೊಂದಿಗಿನ ಮೈತ್ರಿ ಮುರಿದು ಬಿಜೆಪಿ ತೆಕ್ಕೆಗೆ ಸೇರ್ಪಡೆಯಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ