‘ಹಿಂದೂ ಪಾಕಿಸ್ತಾನ’ ಎಂದ ಶಶಿ ತರೂರ್ ಗೆ ಮತ್ತಷ್ಟು ಸಂಕಟ
ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಕಾಂಗ್ರೆಸ್ ಹೈಕಮಾಂಡ್ ತರೂರ್ ಗೆ ಎಚ್ಚರಿಕೆ ನೀಡಿತ್ತು. ಅತ್ತ ಬಿಜೆಪಿ ರಾಹುಲ್ ಗಾಂಧಿ, ತರೂರ್ ಕ್ಷಮೆ ಯಾಚಿಸುವಂತೆ ಆಗ್ರಹಿಸಿತ್ತು. ಆದರೆ ಇದೆಲ್ಲದಕ್ಕೂ ತರೂರ್ ಕ್ಯಾರೇ ಎಂದಿಲ್ಲ.
ಆದರೆ ಇದೀಗ ಇಂತಹ ಹೇಳಿಕೆ ನೀಡಿದ್ದ ತರೂರ್ ವಿರುದ್ಧ ಕೋಲ್ಕೊತ್ತಾದ ವಕೀಲರೊಬ್ಬರು ದೇಶದ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತರೂರ್ ವಿರುದ್ಧ ಸಮನ್ಸ್ ಜಾರಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತರೂರ್ ಆಗಸ್ಟ್ 14 ರೊಳಗಾಗಿ ನ್ಯಾಯಾಲಯದ ಮುಂದೆ ಹಾಜರಿರಾಗಬೇಕಿದೆ.