ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿಯವರನ್ನು ‘ಕಾಗದದ ಹುಲಿ' ಎಂದು ಟೀಕಿಸಲು ಕಾರಣವೇನು?
ಶುಕ್ರವಾರ, 13 ಜುಲೈ 2018 (14:10 IST)
ನವದೆಹಲಿ : ಕಳೆದ ಜೂನ್ ತಿಂಗಳಿನಿಂದ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವುದಕ್ಕೆ ಭಾರತ ಕಡಿವಾಣ ಹಾಕಿದೆ. ಈ ಬಗ್ಗೆ ಇದೀಗ ಕಿಡಿಕಾರಿದ ಕಾಂಗ್ರೆಸ್ 'ನರೇಂದ್ರ ಮೋದಿ ಕಾಗದದ ಹುಲಿ' ಎಂದು ಟೀಕಿಸಿದೆ.
ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಜೈವೀರ್ ಶೆರ್ಗಿಲ್ ಅವರು,’ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವುದು ಕಡಿಮೆಯಾಗಿರುವುದು ಮೋದಿಯವರ ಗೊಂದಲಮಯ ವಿದೇಶಿ ನೀತಿಗೆ ಒಂದು ಅತ್ಯುತ್ತಮ ಉದಾಹರಣೆ. ಅಮೆರಿಕದ ಒತ್ತಡಕ್ಕೆ ಮಣಿದು, ಭಾರತ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಿದೆ.
ಇದರಿಂದಾಗಿ ಇಲ್ಲಿ ಇಂಧನ ಬೆಲೆ ಏರಿಕೆಯಾಗುತ್ತಿದೆ. ಅಮೆರಿಕದ ಒಳಿತಿಗಾಗಿ ಮೋದಿ, ಭಾರತೀಯರ ಹಿತವನ್ನು ಬಲಿ ಕೊಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.ಹಾಗೇ 'ಯಾವುದಕ್ಕೆ ಆದ್ಯತೆ ನೀಡಬೇಕು ಎಂಬುದು ಮೋದಿಯವರಿಗೆ ತಿಳಿದಿರಬೇಕಿತ್ತು. ಅಮೆರಿಕಕ್ಕೆ ಆದ್ಯತೆ ನೀಡಿ ಭಾರತೀಯರ ಮೇಲೆ ತೈಲ ಬೆಲೆಯ ಹೊರೆ ಹೊರುತ್ತಿರುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ