ಪತ್ನಿ ಶಶಿಕಲಾ ನಂತ್ರ ಪತಿ ನಟರಾಜನ್‌ ಜೈಲು ಪಾಲು

ಶುಕ್ರವಾರ, 17 ನವೆಂಬರ್ 2017 (19:46 IST)
ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಆಪ್ತೆಯಾಗಿದ್ದ ವಿ.ಕೆ.ಶಶಿಕಲಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಪಾಲಾದ ನಂತರ ಇದೀಗ ಅವರ ಪತಿ ನಟರಾಜನ್ ಕೂಡಾ ಜೈಲು ದಾರಿ ಹಿಡಿದಿದ್ದಾರೆ. 
 
ಅಕ್ರಮವಾಗಿ ಲೆಕ್ಸಸ್ ಕಾರ್ ಅನ್ನು ಆಮದು ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 2010ರಲ್ಲಿ ಸಿಬಿಐ ವಿಶೇಷ ಕೋರ್ಟ್ ನಟರಾಜನ್ ಅವರಿಗೆ ಎರಡು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. 
 
ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿದ ನಟರಾಜನ್ ಮದ್ರಾಸ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.ಆದರೆ, ಹೈಕೋರ್ಟ್ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ತೀರ್ಪನ್ನು ಎತ್ತಿ ಹಿಡಿದಿದೆ.
 
1994ರಲ್ಲಿ ದೇಶದ ತೆರಿಗೆಯನ್ನು ವಂಚಿಸಿ ನಟರಾಜನ್ ಸೇರಿದಂತೆ ಇತರ ನಾಲ್ವರು ವಿದೇಶದಿಂದ ಲೆಕ್ಸಾಸ್ ಕಾರು ಅಮುದು ಮಾಡಿಕೊಂಡಿದ್ದರು. ಪ್ರಕರಣದ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ಕೇಸ್ ದಾಖಲಿಸಿಕೊಂಡು ನಂತರ ಸಿಬಿಐಗೆ ವರ್ಗಾಯಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ