ಪ್ರಕಾಶ್ ರೈ ನಂತರ ಮತ್ತೊಬ್ಬ ನಟನಿಂದ ಪ್ರಧಾನಿ ಮೋದಿಗೆ ಶ್ರೇಷ್ಠ ನಟ ಪಟ್ಟ!
‘ಮೋದಿ ಒಬ್ಬ ಆಕ್ಷನ್ ಹೀರೋ’ ಎಂದು ಅವರು ಲೇವಡಿ ಮಾಡಿದ್ದಾರೆ. ಪ್ರಧಾನಿ ಮೋದಿ ಬಿಹಾರಕ್ಕೆ ಆಗಮಿಸಿದ್ದಾಗ ಶತ್ರುಘ್ನಾ ಸಿನ್ಹಾ ಬಂದಿರಲಿಲ್ಲ. ಈ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಅವರು ‘ಅದರಲ್ಲಿ ವಿವಾದವೇನೂ ಇಲ್ಲ. ನಾನು ದೇಶದ ಅತೀ ದೊಡ್ಡ ಆಕ್ಷನ್ ಹೀರೋ ಜತೆಗಿದ್ದೇನೆ. ಆದರೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನನ್ನ ಕೈಗೆ ತಡವಾಗಿ ಬಂತಷ್ಟೇ’ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಈ ಹೇಳಿಕೆ ಇದೀಗ ಬಿಜೆಪಿ ನಾಯಕರ ಕಣ್ಣು ಕೆಂಪಗಾಗಿಸಿದೆ.