ಶೆಲ್ಲಿ ದೆಹಲಿ ಮೇಯರ್ ಅಭ್ಯರ್ಥಿಯಾಗಿ ಘೋಷಣೆ

ಶನಿವಾರ, 24 ಡಿಸೆಂಬರ್ 2022 (09:33 IST)
ನವದೆಹಲಿ : ದೆಹಲಿ ಮಹಾನಗರ ಪಾಲಿಕೆಯ ಮೇಯರ್ ಅಭ್ಯರ್ಥಿಗಳ ಪಟ್ಟಿಯನ್ನು ಆಪ್ ಬಿಡುಗಡೆ ಮಾಡಿದೆ.

ಶೆಲ್ಲಿ ಒಬೆರಾಯ್ ಅವರನ್ನ ಮೇಯರ್ ಅಭ್ಯರ್ಥಿಯಾಗಿ ಹಾಗೂ ಆಲೆ ಮೊಹಮ್ಮದ್ ಇಕ್ಬಾಲ್ ಅವರನ್ನ ಉಪಮೇಯರ್ ಅಭ್ಯರ್ಥಿಗಳಾಗಿ ಆಪ್ ಘೋಷಣೆ ಮಾಡಿದೆ. ದೆಹಲಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಧ್ಯಾಪಕಿ ಆಗಿರುವ ಶೆಲ್ಲಿ ಒಬೆರಾಯ್ ಈ ಬಾರಿ ನಡೆದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆಯನ್ನ ಭೇದಿಸಿ ಕೌನ್ಸಿಲರ್ ಆಗಿದ್ದಾರೆ. 

ಇನ್ನೂ ದೆಹಲಿಯಲ್ಲಿ 6 ಬಾರಿ ಶಾಸಕರಾಗಿದ್ದ ಶೋಯೆಬ್ ಇಕ್ಬಾಲ್ ಅವರ ಪುತ್ರ ಆಲೆ ಮೊಹಮ್ಮದ್ ಇಕ್ಬಾಲ್ 17 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ