ದೇವೇಂದ್ರ ಫಡ್ನವಿಸ್ ಪತ್ನಿ ಉದ್ಯೋಗಿಯಾಗಿರುವ ಬ್ಯಾಂಕ್ ಮೇಲೆ ಸೇಡು ತೀರಿಸಿಕೊಂಡ ಶಿವಸೇನೆ!
ಈ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ನಗರ ಪಾಲಿಕೆ ಅಧಿಕಾರಿಗಳ ವೇತನ ಖಾತೆಯನ್ನು ಏಕ್ಸಿಸ್ ಬ್ಯಾಂಕ್ ನಿಂದ ಬೇರೊಂದು ರಾಷ್ಟ್ರೀಕೃತ ಬ್ಯಾಂಕ್ ಗೆ ವರ್ಗಾಯಿಸಲು ತೀರ್ಮಾನಿಸಿದೆ. ಶಿವಸೇನೆಯ ಪ್ರಿಯಾಂಕ ಚತುರ್ವೇದಿ ಮತ್ತು ಅಮೃತಾ ನಡುವೆ ಮಾತಿನ ಚಕಮಕಿ ಆದ ಬಳಿಕ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಬ್ಯಾಂಕ್ ಖಾತೆಗಳನ್ನೂ ಏಕ್ಸಿಸ್ ಬ್ಯಾಂಕ್ ನಿಂದ ವರ್ಗಾಯಿಸಲು ಚಿಂತನೆ ನಡೆದಿದೆಯಂತೆ.